ಹರೇಕಳ-ಅಡ್ಯಾರ್ ಹೊಸ ಸೇತುವೆಯಲ್ಲಿ ಮೊದಲ ಅಪಘಾತ- ಕಾರುಗಳ ಮುಖಾಮುಖಿ ಢಿಕ್ಕಿ, ಮೂವರಿಗೆ ಗಾಯ

Spread the love

ಹರೇಕಳ-ಅಡ್ಯಾರ್ ಹೊಸ ಸೇತುವೆಯಲ್ಲಿ ಮೊದಲ ಅಪಘಾತ- ಕಾರುಗಳ ಮುಖಾಮುಖಿ ಢಿಕ್ಕಿ, ಮೂವರಿಗೆ ಗಾಯ

ಉಳ್ಳಾಲ: ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಮೂವರು ಗಾಯಗೊಂಡಿರುವ ಘಟನೆ ಹರೇಕಳ- ಅಡ್ಯಾರ್ ನೂತನ ಸೇತುವೆಯಲ್ಲಿ ಇಂದು ಸಂಭವಿಸಿದೆ.

ನೂತನವಾಗಿ ನಿರ್ಮಾಣಗೊಂಡು ನ್ಯಾಯಾಲಯದಿಂದ ತಡೆಯಾಜ್ಞೆ ಇರುವ ಹರೇಕಳ-ಅಡ್ಯಾರ್ ಅಣೆಕಟ್ಟು ಸೇತುವೆಯಲ್ಲಿ ಸಂಭವಿಸಿದ ಮೊದಲ ಅಪಘಾತ ಇದಾಗಿದೆ.

ಪುತ್ತೂರು ಕಡೆಯಿಂದ ಅಡ್ಯಾರ್ ನತ್ತ ಬರುತ್ತಿದ್ದ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಆಲ್ಟೋ ಕಾರು ಹಾಗೂ ಎದುರಿನಿಂದ ಬಂದ ಇಕೋ ಸ್ಪೋಟ್ಸ್ ೯ ಕಾರುಗಳ ಮಧ್ಯೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮಹಿಳೆ, ಸಹಪ್ರಯಾಣಿಕೆ ಹಾಗೂ ಇನ್ನೊಂದು ಕಾರಿನಲ್ಲಿದ್ದ ಚಾಲಕ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡ್ಯಾಂ ನಿಂದಾಗಿ ಸ್ಥಳೀಯರ ಜಾಗ ಮುಳುಗಡೆಯಾಗುವ ಭೀತಿಯಿದ್ದರೂ, ಸಂಬಂಧಪಟ್ಟ ಇಲಾಖೆ ಜಾಗಗಳನ್ನು ಒತ್ತುವರಿ ಮಾಡದೇ ಇದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲಿನಲ್ಲಿದೆ. ಹಾಗಾಗಿ ಸೇತುವೆ ನಿರ್ಮಾಣಗೊಂಡು ವರ್ಷ ಕಳೆದರೂ ಅಧಿಕೃತ ಉದ್ಘಾಟನೆ ಇಂದಿಗೂ ಆಗಿಲ್ಲ.


Spread the love

Leave a Reply