ಹರೇಕಳ: ಹಂಚು ತೆಗೆದು ಮನೆಗೆ ನುಗ್ಗಿ ಮಹಿಳೆಗೆ ಕಿರುಕುಳ, ಆರೋಪಿ ಬಂಧನ

Spread the love

ಹರೇಕಳ: ಹಂಚು ತೆಗೆದು ಮನೆಗೆ ನುಗ್ಗಿ ಮಹಿಳೆಗೆ ಕಿರುಕುಳ, ಆರೋಪಿ ಬಂಧನ

ಕೊಣಾಜೆ: ಹಂಚು ತೆಗೆದು ಮನೆಯೊಳಗೆ ನುಗ್ಗಿದ ಕಿರಾತಕನೋರ್ವ ಎರಡು ಮಕ್ಕಳ ತಾಯಿಗೆ ಕಿರುಕುಳ ನೀಡಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳದ ದೆಬ್ಬೇಲಿ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ನಡೆದಿದೆ. ಘಟನೆ ಸಂಬಂಧ ಆರೋಪಿಯನ್ನು ಇಂದು ಬಂಧಿಸಲಾಗಿದೆ.

ದೆಬ್ಬೇಲಿ ನಿವಾಸಿ ನೌಫಾಲ್ (38) ಬಂಧಿತ ಆರೋಪಿ. ನೆರೆಮನೆಯ ಮಹಿಳೆ ತನ್ನ ಮಕ್ಕಳಿಬ್ಬರ ಜೊತೆಗೆ ಮಲಗಿರುವ ಸಂದರ್ಭ ಹಂಚು ತೆಗೆದು ಒಳನುಗ್ಗಿದ ಆರೋಪಿ ನೌಫಾಲ್ ಮಹಿಳೆ ಮೈ ಸ್ಪರ್ಶಿಸಿದ್ದಾನೆ. ತಕ್ಷಣ ಎಚ್ಚೆತ್ತ ಮಹಿಳೆ ಬೊಬ್ಬೆ ಹಾಕಿದ್ದು, ಆರೋಪಿ ಮುಂಬಾಗಿಲ ಮೂಲಕ ಓಡಿ ಪರಾರಿಯಾಗಿದ್ದಾನೆ. ಸ್ಥಳೀಯರು ಸ್ಥಳಕ್ಕಾಗಮಿಸುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದನು. ಮಹಿಳೆ ಪತಿ ರಾತ್ರಿಪಾಳಯ ಕೆಲಸ ನಡೆಸುವವರಾಗಿದ್ದಾರೆ. ಘಟನೆ ಸಂಬಂಧ ಸ್ಥಳೀಯರು ಆರೋಪಿಗಾಗಿ ಹುಡುಕಾಟ ನಡೆಸುವಾಗ ಮನೆಯೊಳಗೆ ಆರೋಪಿ ನೌಫಾಲನ ಮೊಬೈಲ್ ಪತ್ತೆಯಾಗಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದಂತೆ ಬೆಳಿಗ್ಗೆನೇ ಆರೋಪಿಯನ್ನು ಬಂಧಿಸಲಾಗಿದೆ. ಸಂಜೆ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವಿಕೃತಕಾಮಿ ಆರೋಪಿ !
ಬಂಧಿತ ಈ ಹಿಂದೆಯೂ ಸ್ಥಳೀಯ ಹಲವು ಮನೆಗಳ ಬಚ್ಚಲು ಮನೆಗೆ ನುಗ್ಗಿ ಪೆಟ್ಟು ತಿಂದಿದ್ದಾನೆ. ಅಲ್ಲದೆ ಮಹಿಳೆಯರಿಗೂ ಕಿರುಕುಳ ನೀಡಿದ್ದರೂ, ಪ್ರಕರಣಕ್ಕೆ ಅಂಜಿ ದೂರು ದಾಖಲಿಸಲು ಹಿಂದೇಟು ಹಾಕಿದ್ದರು. ವಿವಾಹಿತನಾಗಿರುವ ಈತ ಎರಡು ಮಕ್ಕಳ ತಂದೆಯಾಗಿದ್ದಾನೆ. ಸರಿಯಾಗಿ ಕೆಲಸಕ್ಕೂ ಹೋಗದೆ ದಿನವಿಡೀ ತನ್ನ ಚಾಳಿ ನಡೆಸುತ್ತಾ ಬಂದಿದ್ದಾನೆ .ನನಿನ್ನೆ ತಡರಾತ್ರಿ ನಡೆದ ಘಟನೆಯಿಂದ ಆಘಾತಗೊಂಡ ಮಹಿಳೆ ದೂರು ನೀಡಲು ಹಿಂದೇಟು ಹಾಕಿದ್ದು, ಸ್ಥಳೀಯ ಹಿಂದೂ ಸಂಘಟನೆ ಕಾರ್ಯಕರ್ತರು ಧೈರ್ಯ ನೀಡಿ ದೂರು ದಾಖಲಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆರೋಪಿ ಬಂಧಿಸಿರುವ ಕೊಣಾಜೆ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


Spread the love