ಹಾಸನ: ಜೀಪ್ ಪಲ್ಟಿ 3 ಮಂದಿ ಸಾವು

Spread the love

ಹಾಸನ: ಜೀಪೊಂದು ರಸ್ತೆ ಬದಿಗೆ ಉರುಳಿದ ಪರಿಣಾಮ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಭಾನುವಾರ ಬೆಳಿಗ್ಗೆ ಹೊಳೆನರಸೀಪುರದಲ್ಲಿ ನಡೆದಿದೆ.
ಮೃತಪಟ್ಟವರನ್ನು ಶಶಿಕಲಾ (27), ಯಶೋಧ (40), ಜಯಂತಿ (18) ಎಂದು ಗುರುತಿಸಲಾಗಿದ್ದು, ಹಾಸನದಿಂದ ಹೊಳೆನರಸೀಪುರಕ್ಕೆ ಹೋಗುತ್ತಿದ್ದ ಜೀಪ್ ಸಾಕೇನಳ್ಳಿ ಗೇಟ್ ಬಳಿ ರಸ್ತೆ ಬದಿಗೆ ಉರುಳಿದ ನಂತರ, ಬಂಡೆ ಮೇಲೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಎಸ್‌ಪಿಜಿ ಕಂಪನಿಯೊಂದರಲ್ಲಿ ರಾತ್ರಿ ಪಾಳಯ ಕೆಲಸ ಮುಗಿಸಿಕೊಂಡು ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಜೀಪ್‌ನಲ್ಲಿ 7 ಮಂದಿ ಪ್ರಯಾಣಿಸುತ್ತಿದ್ದು, ಇಬ್ಬರಿಗೆ ಸಣ್ಣ ಪೆಟ್ಟುಗಳಾಗಿದ್ದು, ಮತ್ತೋರ್ವ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸಲಾಗಿದೆ.

ಜೀಪಿನ ಚಾಲಕ ಪರಾರಿಯಾಗಿದ್ದು, ಈ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.


Spread the love