ಹುಟ್ಟು ಹಬ್ಬ ಮುಗಿಸಿ ವಾಪಾಸಾಗುತ್ತಿದ್ದ ಮೂವರು ಯುವಕರ ಮೇಲೆ ತಂಡದಿಂದ ಹಲ್ಲೆ

Spread the love

ಹುಟ್ಟು ಹಬ್ಬ ಮುಗಿಸಿ ವಾಪಾಸಾಗುತ್ತಿದ್ದ ಮೂವರು ಯುವಕರ ಮೇಲೆ ತಂಡದಿಂದ ಹಲ್ಲೆ

ಮಂಗಳೂರು: 5 ಮಂದಿ ಯುವಕರ ಗುಂಪೊಂದು 3 ಮಂದಿ ಯುವಕರು ಹುಟ್ಟುಹಬ್ಬ ಆಚರಣೆ ಮುಗಿಸಿ ವಾಪಾಸು ಮನೆಗೆ ಬರುತ್ತಿದ್ದ ವೇಳೆ ಹಲ್ಲೆ ನಡೆಸಿದ ಘಟನೆ ತಣ್ಣೀರುಬಾವಿ ಚರ್ಚಿನ ಬಳಿ ಶನಿವಾರ ನಡೆದಿದೆ.

ಪೋಲಿಸ್ ಮೂಲಗಳ ಪ್ರಕಾರ್ ಸಬೀತ್, ಸಮೀರ್, ನಿತೇಶ್, ಸ್ವೀಟಿ ಮತ್ತು ರೋಶನಿ ಎಂಬವರು ತಮ್ಮ ಗೆಳತಿ ಸ್ವೀಟಿಯ ಹುಟ್ಟು ಆಚರಣೆ ನಡೆಸಿ ವಾಪಾಸು ಬರುತ್ತಿದ್ದ ವೇಳೆ ಆರೋಪಿಗಳು ಮೂವರು ಯುವಕರಿಗೆ ಹೊಡೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಸಿದ ಮೂವರ ಯುವಕರಾದ ದೀಕ್ಷಿತಿ, ಸುಕೇಶ್ ಮತ್ತು ವರುಣ್ ಅವರ ಗುರುತು ಪತ್ತೆಯಾಗಿದ್ದು ಉಳಿದಿಬ್ಬರು ಯಾರು ಎನ್ನುವುದು ತಿಳಿದು ಬಂದಿಲ್ಲ.

ಪಣಂಬೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


Spread the love