ಹೆಬ್ರಿಯಲ್ಲಿ ಪಶ್ಚಿಮಘಟ್ಟದ ಸಂರಕ್ಷಣೆ ಕುರಿತು ಪರಿಸರ ಜಾಗೃತಿ ಜಾಥಾ

Spread the love

ಕಾರ್ಕಳ : ಕರ್ನಾಟಕ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಡುಪಿ ಜಿಲ್ಲಾ ಸಮಿತಿ, ವತಿಯಿಂದ ಕಾರ್ಕಳ ರೋಟರಿ ಕ್ಲಬ್ ಹಾಗೂ ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಇಕೋಕ್ಲಬ್, ಹೆಬ್ರಿ ಗ್ರಾಮ ಪಂಚಾಯತ್, ಹೆಬ್ರಿ ಜೇಸಿಐ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಹೆಬ್ರಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶ ಸಂರಕ್ಷಣೆ ಕುರಿತು ಪರಿಸರ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿತ್ತು.

image001sorake-public-meet-kundapur-20160502 image002sorake-public-meet-kundapur-20160502

ಶಾಲಾವರಣದಿಂದ ಹೆಬ್ರಿ ಮೂಲಕ ಬೈಸಿಕಲ್‍ನಲ್ಲಿ ಸಾಗಿದ ವಿದ್ಯಾರ್ಥಿಗಳು ಹಾಗೂ ಪರಿಸರಾಸಕ್ತರು ಪಶ್ಚಿಮ ಘಟ್ಟ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆ ಕುರಿತು ಫಲಕಗಳೊಂದಿಗೆ ಪರಿಸರ ಘೋಷಣೆಗಳನ್ನು ಕೂಗುತ್ತ ಸಾಗಿದರು.
ಪರಿಸರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಸೋಮೇಶ್ವರ ವನ್ಯಜೀವಿ ವಲಯಾಧಿಕಾರಿಗಳು ಬಿ.ಸುಬ್ಬಯ್ಯ ನಾಯ್ಕ ಅವರು, ಪಶ್ಚಿಮ ಘಟ್ಟ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ, ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಎಂದರು. ಕಾಡಿನ ರಕ್ಷಣೆಯಲ್ಲಿ ಎಲ್ಲರೂ ತೊಡಗಿಸಿಕೊಂಡು ಜೀವಸಂಕುಲ ಉಳಿಸಬೇಕಿದೆ ಎಂದರು.
ಪಶ್ಚಿಮ ಘಟ್ಟ ಸಂರಕ್ಷಣೆಯ ಮಹತ್ವ ಮತ್ತು ಪರಿಸರ ಜಾಗೃತಿ ಜಾಥಾ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನದ ರಾಜ್ಯ ಪರಿಸರ ಪ್ರೇಮಿ ಕೊಡಗಿನ ಟಿ.ಜಿ.ಪ್ರೇಮಕುಮಾರ್ ಅಪಾರವಾದ ಜೀವಸಂಕಲಗಳ ಉಳಿವಿಗೆ ಪಶ್ಚಿಮ ಘಟ್ಟ ಪ್ರದೇಶವನ್ನು ಸಂರಕ್ಷಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಇಲ್ಲದಿದ್ದಲ್ಲಿ ಇಡೀ ಜೀವಸಂಕುಲವೇ ನಾಶವಾಗುವ ಅಪಾಯವಿದೆ ಎಂದರು .
ಅರಣ್ಯ ಸಂಪತ್ತು ಸಂರಕ್ಷಿಸಿ ವನ್ಯಜೀವಿ ಸಂತತಿ ಉಳಿಸಬೇಕಾಗಿದೆ, ನೀರನ್ನು ಮಿತವಾಗಿ ಬಳಸಬೇಕಾಗಿದೆ, ಪ್ರತಿದಿನ ಪರಿಸರ ದಿನವನ್ನು ಆಚರಿಸುವ ಮೂಲಕ ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಇಂಥಹ ಪರಿಸರ ಜಾಗೃತಿ ಜಾಥಾ ಅಗತ್ಯವಿದೆ ಎಂದು ಪ್ರೇಮ್‍ಕುಮಾರ್ ಹೇಳಿದರು.
ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಪರಿಸರ ಕರಪತ್ರ ಬಿಡುಗಡೆಗೊಳಿಸಿದ ಕಾರ್ಕಳ ರೋಟರಿ ಕ್ಲಬ್‍ನ ಅಧ್ಯಕ್ಷ ಚಂದ್ರಶೇಖರ್ ಹೆಗ್ಡೆ ಮಾತನಾಡಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಾಗ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬಹುದು ಎಂದರು. ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಪರಿಸರ ಜಾಗೃತಿ ಆಂದೋಲನ ಹಮ್ಮಿಕೊಂಡು ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಸಹಕಾರಿಯಾಗಿದೆ ಎಂದರು.
ರಾಜ್ಯ ವಿಜ್ಞಾನ ಪರಿಷತ್‍ನ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಯು.ಆರ್ ಮಧ್ಯಸ್ಥ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ವಿಜ್ಞಾನ ಪರಿಷತ್‍ನ ದಕ್ಷಿÀಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಸುಭಾಷ್ ರೈ, ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಹೆಗ್ಡೆ, ಜೇಸಿಐ ಹೆಬ್ರಿ ಅಧ್ಯಕ್ಷ ಪ್ರಸಾದ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ದಿನೇಶ ಶೆಟ್ಟಿಗಾರ್, ಕಾಲೇಜಿನ ಉಪಪ್ರಾಂಶುಪಾಲರು ಎಸ್.ದಿವಾಕರ ವiರಕಾಲ ಎಸ್, ಜೇಸಿರೇಟ್ ಹೆಬ್ರಿ ಇದರ ಅಧ್ಯಕ್ಷೆ ಸುನೀತಾ ಎ ಹೆಗ್ಡೆ, ನಾಗೇಶ ಅರಳಕುಪ್ಪೆ, ಶಾಲಾ ವಿದ್ಯಾರ್ಥಿಗಳು, ರೋಟರಿ ಸಂಸ್ಥೆ ಸದಸ್ಯರು ಹಾಗೂ ಪರಿಸರಾಸಕ್ತರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಜಾಥಾದಲ್ಲಿ ಪಶ್ಚಿಮ ಘಟ್ಟ ಪ್ರದೇಶ ಸಂರಕ್ಷಣೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಕಾಡೇ ರಾಷ್ಟ್ರದ ಸಂಪತ್ತು, ಹಸಿರೇ ಉಸಿರು, ಬೈಸಿಕಲ್ ಬಳಸಿ ಇಂಧನ ಉಳಿಸಿ ನೀರನ್ನು ಮಿತವಾಗಿ ಬಳಸಿ, ಬೆಂಕಿಯಿಂದ ಅರಣ್ಯವನ್ನು ರಕ್ಷಿಸಿ, ಜೀವ ಸಂಕುಲದ ರಕ್ಷಣೆ ನಮ್ಮೆಲ್ಲರ ಹೊಣೆ ಇತ್ಯಾದಿ ಪರಿಸರ ಸಂರಕ್ಷಣೆ ಕುರಿತು ಪರಿಸರ ಸಂಬಂಧಿ ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಜಾಗೃತಿ ಮೂಡಿಸಿದರು.
ಪರಿಸರ ಪ್ರೇಮಿ ಟಿ.ಜಿ.ಪ್ರೇಮ್‍ಕುಮಾರ್ ಅವರು ಪಶ್ಚಿಮ ಘಟ್ಟ ಸಂರಕ್ಷಣೆ ಜೊತೆಗೆ ನೆಲ ಜಲ ಮತ್ತು ಪರಿಸರ ರಕ್ಷಣೆ ಮಾಡುತ್ತೇವೆ. ಪ್ರಕೃತಿಗೆ ಯಾವುದೇ ರೀತಿಯಲ್ಲಿ ಧಕ್ಕೆಯನ್ನುಂಟುಮಾಡುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಮಾಡುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.


Spread the love