ಹೊರ ರಾಜ್ಯ ಕಾರ್ಮಿಕರನ್ನು ಕಳುಹಿಸಲು ಕ್ರಮ ಕೈಗೊಳ್ಳವಂತೆ ಮುಖ್ಯಮಂತ್ರಿಗೆ ದಕ ಕಾಂಗ್ರೆಸ್ ಮನವಿ

??
Spread the love

ಹೊರ ರಾಜ್ಯ ಕಾರ್ಮಿಕರನ್ನು ಕಳುಹಿಸಲು ಕ್ರಮ ಕೈಗೊಳ್ಳವಂತೆ ಮುಖ್ಯಮಂತ್ರಿಗೆ ದಕ ಕಾಂಗ್ರೆಸ್ ಮನವಿ

ಮಂಗಳೂರು: ಕೋವಿಡ್-19 ನಲ್ಲಿ ತೊಂದರೆಗೆ ಒಳಗಾಗಿರುವ ಕಾರ್ಮಿಕರನ್ನು ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸಲು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ದಕ ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

??

ದ.ಕ.ಜಿಲ್ಲೆಯಲ್ಲಿ ಸಾವಿರಾರು ಕಾರ್ಮಿಕರು ಗುಜರಾತ್, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ ಮೊದಲಾದ ರಾಜ್ಯಗಳಿಂದ ಬಂದು ಕೋವಿಡ್-19 ಕಾರಣಗಳಿಗಾಗಿ ಅವರವರ ಜಿಲ್ಲೆಗಳಿಗೆ ತೆರಳು ಸಾಧ್ಯವಾಗದೇ ಇನ್ನೂ ಬೀದಿಯಲ್ಲಿರುವುದು ಕಂಡುಬಂದಿದೆ. ಅವರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಲು ರಾಜ್ಯ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು. ರೈಲುಗಳ ವ್ಯವಸ್ಥೆಯನ್ನು ಮಾಡುವಂತೆ ಕೂಡಲೇ ಕ್ರಮಕೈಗೊಳ್ಳಬೆಕು, ಹೊರ ರಾಜ್ಯಗಳಿಂದ ಕರ್ನಾಟಕ್ಕೆ ಆಗಮಿಸುವ ಅದರಲ್ಲೂ ಕರಾವಳಿ ಜಿಲ್ಲೆಗಳಿಗೆ ಆಗಮಿಸಲು ಅರ್ಜಿ ಸಲ್ಲಿಸಿರುವ ಸುಮಾರು 50 ಸಾವಿರಕ್ಕೂ ಅಧಿಕ ಮುಂಬೈ ಮತ್ತು ನೆರೆ ರಾಜ್ಯಗಳಲ್ಲಿರುವ ಕನ್ನಡಿಗರಿಗೆ ಯಾವುದೇ ವ್ಯವಸ್ಥೆಯನ್ನು ಮಾಡದೇ ಆ ಭಾಗದಲ್ಲಿ ವಾಸಿಸುತ್ತಿರುವ ನಮ್ಮ ಕನ್ನಡಿಗರು ಅನಾಥರಾಗಿದ್ದಾರೆ. ಅಲ್ಲದೇ ಆಕ್ರೋಶಕ್ಕೂ ಒಳಗಾಗಿದ್ದಾರೆ. ಕೇಂದ್ರ ಸರ್ಕಾರವು ಹೊರ ರಾಜ್ಯಗಳಿಂದ ತವರು ಜಿಲ್ಲೆಗಳಿಗೆ / ರಾಜ್ಯಗಳಿಗೆ ತೆರಳಲು ಯಾವುದೇ ಅಡ್ಡಿ ಇಲ್ಲವೆಂದು ಘೋಷಣೆ ಮಾಡಿದ್ದರು, ಇವರೆಗೆ ಕರಾವಳಿ ಜಿಲ್ಲೆಗಳಿಗೆ ಆಗಮಿಸಲು ಈ ಭಾಗ ಜಿಲ್ಲಾಡಳಿತಗಳು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಕೂಡಲೇ ಕ್ರಮತೆಗೆದುಕೊಳ್ಳಬೇಕೆಂದು ಕೋರುತ್ತೇವೆ.-

• ಕರಾವಳಿ ಭಾಗದಲ್ಲಿ ಕೋವಿಡ್-19 ವೈರಾಣು ಹೆಚ್ಚುತ್ತಿರುವುದರಿಂದ ಮೂಲಭೂತ ವ್ಯವಸ್ಥೆಗಳನ್ನು ಹೆಚ್ಚಿಸಲು ಕೊರೆಂಟೈನ್ ಆಗಿರುವ ಲೋಪದೊಷಗಳನ್ನು ಸರಿಪಡಿಸಲು ಕೂಡಲೇ ವ್ಯವಸ್ಥೆ ಮಾಡಬೇಕು.

• ವಿದೇಶದಿಂದ ಆಗಮಿಸುವ ಕನ್ನಡಿಗರಿಗೆ ಸೂಕ್ತ ಕೊರೆಂಟೈನ್ ವ್ಯವಸ್ಥೆ ಮಾಡಬೇಕಲ್ಲದೆ ಕೋವಿಡ್ ಸಂಯಾಸ್ಪದ ವ್ಯಕ್ತಿಗಳಿಗೆ ನಿರ್ದಿಷ್ಟ ಮಟ್ಟದ ಚಿಕಿತ್ಸೆ ಜೊತೆಗೆ ಹಾರೈಕೆಗೆ ವಿಶೇಷ ಗಮನ ನೀಡಬೇಕು.

• ವಿದೇಶದಲ್ಲಿರುವ ಕರಾವಳಿ ಭಾಗದ ಕನ್ನಡಿಗರಿಗೆ ಮಂಗಳೂರಿಗೆ ಆಗಮಿಸಲು ಸರ್ಕಾರ ವಿಮಾನಗಳು ಏರ್ಪಾಡು ಮಾಡಬೇಕು. ಅದೇ ರೀತಿ ಜಿಲ್ಲೆಯಲ್ಲಿರುವ ಉದ್ಯೋಗಕ್ಕಾಗಿ ತೆರಳಲಿರುವ ಕಾರ್ಮಿಕರಿಗೂ ವಿಮಾನ ಮತ್ತು ರೈಲುಗಳ ವ್ಯವಸ್ಥೆ ಮಾಡಬೇಕು.

• ಅಸಂಘಟಿತ ಕಾರ್ಮಿಕರಿಗೆ ಅಂದರೆ ಬೀಡಿ ಕಾರ್ಮಿಕರಿಗೆ , ಬಸ್ಸು ನೌಕರರಿಗೆ, ಟೈಲರ್ಗಳಿಗೆ, ಬೀದಿ ಬದಿ ವ್ಯಾಪರಸ್ಥರಿಗೆ, ಗ್ಯಾರೇಜ್ ಕಾರ್ಮಿಕರಿಗೆ, ಎಲೆಕ್ರ್ಟೀಕಲ್ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನ್ನು ನೀಡಬೇಕು.

• ಕರಾವಳಿ ಭಾಗದಲ್ಲಿ ಮಳೆ ಮತ್ತು ಬಿರುಗಾಳಿ ಬರುವ ಬಗ್ಗೆ ಹವಮಾನ ವರದಿ ತಿಳಿಸಿದರೂ, ಜಿಲ್ಲಾಡಳಿತಗಳಿಗೆ ಸುರಕ್ಷಿತ ಕ್ರಮಕೈಗೊಳ್ಳಲು ಹೆಚ್ಚುವರಿ ಹಣ ಮತ್ತು ಕಾರ್ಯಪಡೆಯನ್ನು ನೇಮಿಸುವಂತೆ ಸೂಚಿಸಬೇಕು.

• ಕಳೆದ ವರ್ಷ ನೆರೆಯಲ್ಲಿ ಮನೆ, ಆಸ್ತಿಗಳನ್ನು ಕಳೆದುಕೊಂಡವರಿಗೆ ಇನ್ನೂ ಸೂಕ್ತ ಪರಿಹಾರ ನೀಡದೇ ಇದ್ದು, ಕೂಡಲೇ ಪರಿಹಾರವನ್ನು ಒದಗಿಸಲು ಕ್ರಮಕೈಗೊಳ್ಳಬೇಕು.

• ಕಳೆದ 6 ತಿಂಗಳಿಂದ ವೃದ್ಧಾಪ ವೇತನ, ಅಂಗವೀಕಲ ವೇತನ ಇತರೆ ಯಾವುದೇ ಪಿಂಚಣಿಗಳು ಫಲಾನುಭವಿಗಳಿಗೆ ತಲುಪದೇ ಅದನ್ನು ಆಧರಿಸಿ ಜೀವಿಸುವ ಅನೇಕರಿಗೆ ತೊಂದರೆ ಒಳಗಾಗಿದ್ದು ಕೂಡಲೇ ಪಿಂಚಣಿ ಹಣವನ್ನು ಅರ್ಹರಿಗೆ ತಲುಪಿಸುವಂತೆ ಕ್ರಮಕೈಗೊಳ್ಳಬೇಕು.

• ಕರಾವಳಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ಅತಿಹೆಚ್ಚಾಗಿ ನಡೆಯುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು.

ಮೇಲಿನ ಎಲ್ಲಾ ಬೇಡಿಕೆಗಳನ್ನು ಸೂಕ್ತವಾಗಿ ಪರಿಶೀಲಿಸಿ ಕ್ರಮತೆಗೆದುಕೊಳ್ಳಲು ವಿವಿಧ ಇಲಾಖೆಗಳಿಗೆ ಸೂಚಿಸಿ, ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಪರವಾಗಿ ಆಗ್ರಹಿಸಿದ್ದಾರೆ.

ಈ ವೇಳೆ ಶಾಸಕರಾದ ಯು ಟಿ ಖಾದರ್, ಐವನ್ ಡಿಸೋಜಾ, ಹರೀಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹಾಗೂ ಇತರರು ಉಪಸ್ಥಿತರಿದ್ದರು.


Spread the love