ಹೊಸದೊಂದು ಹೆಜ್ಜೆ: ಸುಸ್ಥಿರ‘ಶುದ್ಧಗಂಗಾ’

Spread the love

ಹೊಸದೊಂದು ಹೆಜ್ಜೆ: ಸುಸ್ಥಿರ‘ಶುದ್ಧಗಂಗಾ’

ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನದ ಮೂಲಕ ಮನ್ನಣೆ ಪಡೆದಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ, ಡಿ, ವೀರೇಂದ್ರ ಹೆಗ್ಗಡೆ ಮತ್ತೊಂದು ಮಹತ್ವದ ಹೆಜ್ಜೆಯಿರಿಸಿದ್ದಾರೆ. ಶುದ್ಧನೀರು ತಲುಪಿಸುವ ಸಂಕಲ್ಪದೊಂದಿಗಿನ ಹೊಸದೊಂದು ಕಾರ್ಯಕ್ರಮ ರೂಪಿಸಿದ್ದಾರೆ.

ಸದ್ಯದೇಶದ ಹಲವೆಡೆ ಶುದ್ಧ ಕುಡಿಯುವ ನೀರಿಗಾಗಿ ಜನರು ಬಹಳ ಕಷ್ಟಪಡುವಂತಹ ಸ್ಥಿತಿ ಎದುರಾಗಿದೆ. ಇಂದು ನಮ್ಮದೇಶದಲ್ಲಿ ಸುಮಾರು 22.5 ಕೋಟಿಜನರು ಶುದ್ಧಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಇಂತಹ ಶುದ್ಧಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ‘ಶುದ್ಧಗಂಗಾ’ ಎಂಬ ಸುಸ್ಥಿರ ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಪ್ರಾರಂಭಿಸಿದ್ದಾರೆ.

image001shudha-ganga-mangalorean-com-20161128-001 image002shudha-ganga-mangalorean-com-20161128-002 image003shudha-ganga-mangalorean-com-20161128-003

ಲಕ್ಷದೀಪೋತ್ಸವ ಪ್ರಯುಕ್ತ ಏರ್ಪಾಡಾಗಿರುವ ವಸ್ತು ಪ್ರದರ್ಶನದಲ್ಲಿ ಈ ಯೋಜನೆಯ ಕುರಿತಾದ ವಿಸ್ತøತ ಮಾಹಿತಿ ಲಭ್ಯವಿದೆ. ಈ ಯೋಜನೆಯ ವಿವಿಧ ವಿನ್ಯಾಸಗಳು, ಚಿತ್ರಗಳು ಯೋಜನೆಯ ವಿಶೇಷತೆಯನ್ನು ಸಾರುತ್ತವೆ. ಈ ಶುದ್ಧ ಗಂಗಾ ಕುಡಿಯುವ ನೀರಿನ ಯೋಜನೆಯಿಂದ ಇಂದು ಕುಡಿಯುವ ನೀರಿನ ಅಗತ್ಯವಿರುವ ಜನರಿಗೆ ನೀರನ್ನು ಒದಗಿಸುವಂತಹ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿರುವ ಹೆಗ್ಗಡೆಯವರು ಸದ್ಯ ಧರ್ಮಸ್ಥಳದ ಹತ್ತಿರದ  ಪ್ರದೇಶಗಳಿಗೆ ನೀರನ್ನು ಒದಗಿಸುವ ಕಾರ್ಯ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಪ್ರದೇಶಗಳಲ್ಲಿಯೂ ಕೂಡಾ ಈ ಯೋಜನೆಯನ್ನು ಪ್ರಾರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಅಮೇರಿಕದ ತಂತ್ರಜ್ಞಾನವನ್ನು ಹೊಂದಿರುವ ಈ ತಂತ್ರಜ್ಞಾನದಲ್ಲಿ ನಾಲ್ಕು ರೀತಿಯಲ್ಲಿ ನೀರನ್ನು ಶುದ್ಧೀಕರಿಸಲಾಗುತ್ತದೆ. ಪ್ರತಿನಿತ್ಯ ಒಂದು ಮನೆಗೆ ಇಪ್ಪತ್ತು ಲೀಟರ್ ನೀರನ್ನು ಈ ಯೋಜನೆಯ ಅಡಿಯಲ್ಲಿ ಒದಗಿಸಲಾಗುತ್ತದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ರಾಜ್ಯದ ಹಲವೆಡೆ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

ಹಾನಿಕಾರಕ ಧಾತುಗಳಾದ ಆರ್ಸೆನಿಕ್, ಕ್ರೋಮಿಯಂ, ಕ್ಯಾಡ್ಮಿಯಂ, ಸೀಸ, ಸತು ಮುಂತಾದ ವಸ್ತುಗಳು ಅಂತರ್ಜಲದೊಂದಿಗೆ ಬೆರೆತುನೀರನ್ನು ಕುಡಿಯಲು ಬಾರದಂತಹ ಪರಿಸ್ಥಿತಿ ಬಂದೊದಗಿದೆ. ಇಂದು ನಮ್ಮದೇಶದಲ್ಲಿ 213 ಜಿಲ್ಲೆಗಳಲ್ಲಿ 2.5ಕೋಟಿಜನರು ಫ್ಲೋರೈಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ಸಮಸ್ಯೆಯಿಂದ ಹೊರಬರಲು ಈ ‘ಶುದ್ಧಗಂಗಾ’ ಯೋಜನೆಯು ಸಹಾಯಕವಾಗಲಿದೆ.

ಕರ್ನಾಟಕ ರಾಜ್ಯದಲ್ಲಿ ಬಾಗಲಕೋಟೆ, ಬೆಂಗಳೂರು, ಬಳ್ಳಾರಿ, ಬೆಳಗಾವಿ, ಬೀದರ್, ಬಿಜಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಗುಲ್ಬರ್ಗಾ, ಹಾವೇರಿ, ಕೋಲಾರ, ಕೊಪ್ಪಳ, ಮಂಡ್ಯ, ರಾಯಚೂರು, ತುಮಕೂರು ಹಾಗೂ ಚಿಕ್ಕಮಗಳೂರಿನ ಕಡೂರು ಮುಂತಾದೆಡೆಗಳಲ್ಲಿ ಕುಡಿಯುವ ನೀರಿನಲ್ಲಿ ಈ ಫ್ಲೋರೈಡ್‍ನ ಅಂಶ ಅಧಿಕ ಪ್ರಮಾಣದಲ್ಲಿ ಕಂಡುಬಂದಿದೆ. ಇಂತಹ ಪ್ರದೇಶಗಳಲ್ಲಿ ಈ ಶುದ್ಧಗಂಗಾ ಯೋಜನೆಯನ್ನು ಜಾರಿಗೊಳಿಸುವುದರಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದಾಗಿದೆ.

ಇಂತಹ ಅಶುದ್ಧ ಕುಡಿಯುವ ನೀರಿನ ಪರಿಣಮವಾಗಿ ಜನರು ರೋಗಗಳಿಗೆ ತುತ್ತಾಗುತ್ತಿರುವುದನ್ನು ಮನಗಂಡಡಾ, ಡಿ, ವೀರೇಂದ್ರ ಹೆಗ್ಗಡೆಯವರು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ಶುದ್ಧಗಂಗಾ’ ಕುಡಿಯುವ ನೀರಿನ ಘಟಕವನ್ನು ಧರ್ಮಸ್ಥಳದಲ್ಲಿ ಪ್ರಾರಂಭಿಸಿರುವುದು ಒಂದು ಮಹತ್ವದ ನಡೆಯಾಗಿದೆ.

ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಮತ್ತುಕಡೂರು ಶಾಸಕ ವೈ ಎಸ್ ವಿ ದತ್ತ ಈ ಯೋಜನೆಗೆ ಸಂತೋಷ ವ್ಯಕ್ತಪಡಿಸಿದ್ದು ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ರಾಜ್ಯದೆಲ್ಲೆಡೆ ಅನುಷ್ಟಾನಕ್ಕೆ ಮಹತ್ವ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.

ಯಾವುದೇ ಸಂದರ್ಭದಲ್ಲಿ ಬೇಕಾದರೂ ಈ ಶುದ್ಧಗಂಗಾಯೋಜನೆಯನ್ನು ಸಂಪರ್ಕಿಸಬಹುದಾಗಿದೆ. ಶುದ್ಧಗಂಗಾ ಸಹಾಯವಾಣಿ: 8762693877 ಗೆ ಸಂಪರ್ಕಿಸಬಹುದಾಗಿದೆ.

ಭರತ್ ಭಾರದ್ವಾಜ್, ಹೆಚ್,ಎಸ್,  ಚಿತ್ರಗಳು: ಚೈತನ್ಯಕುಡಿನಲ್ಲಿ


Spread the love