ಹೊಸ ವರ್ಷಾಚರಣೆಗೆ ಬಜರಂಗದಳ, ವಿಎಚ್ ಪಿ ವಿರೋಧ; ಪೋಲಿಸ್ ಆಯುಕ್ತರಿಗೆ ಮನವಿ

Spread the love

ಹೊಸ ವರ್ಷಾಚರಣೆಗೆ ಬಜರಂಗದಳ, ವಿಎಚ್ ಪಿ ವಿರೋಧ; ಪೋಲಿಸ್ ಆಯುಕ್ತರಿಗೆ ಮನವಿ

ಮಂಗಳೂರು: ಹೊಸ ವರ್ಷ ಆಚರಣೆಯ ಹೆಸರಿನಲ್ಲಿ 31 ಡಿಸೆಂಬರ್ ರಂದು ನಡೆಯುವ ಡಿ ಜೆ ಪಾರ್ಟಿ, ಅಶ್ಲೀಲ  ನೃತ್ಯಗಳಂತಹ ಕಾರ್ಯಕ್ರಮಕ್ಕೆ ಜಿಲ್ಲಾ ಪೋಲಿಸ್ ಇಲಾಖೆ ಅನುಮತಿ ನೀಡಿದಂತೆ ಬಜರಂಗದಳ ಪೋಲಿಸ್ ಆಯುಕ್ತರಿಗೆ ಮನವಿ ಸಲ್ಲಿಸಿತು.

ಬಜರಂಗದಳ ನಾಯಕ ಶರಣ್ ಪಂಪ್ ವೆಲ್ ನೇತೃತ್ವದ ನಿಯೋಗ ಪೋಲಿಸ್ ಆಯುಕ್ತರಿಗೆ ಭೇಟಿ ಮಾಡಿ ಹೊಸ ವರುಷದ ಹೆಸರಿನಲ್ಲಿ  ಡಿಸೆಂಬರ್ 31ರಂದು ನಗರದ ಹಲವು ಹೋಟೆಲ್, ಪಬ್ ಮತ್ತು ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಡಿ ಜೆ ಪಾರ್ಟಿ, ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯಗಳ ಪಾನ ಪಾರ್ಟಿ ಆಯೋಜನೆ ಮಾಡಿದ್ದು ಇದನ್ನು ವಿಶ್ವಹಿಂದೂ ಪರಿಷದ್ – ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ,

ಈಗಾಗಲೇ ಲವ್ ಜಿಹಾದ್ ಜಿಲ್ಲೆಯಲ್ಲಿ ತೀವ್ರವಾಗಿದ್ದು  ಮುಗ್ದ ಹೆಣ್ಣುಮಕ್ಕಳನ್ನು  ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸಲು ಪ್ರಚೋದನೆ ನೀಡಲಾಗುತ್ತಿದೆ, ಆದುದರಿಂದ ಯಾವುದೇ ಹೋಟೆಲ್, ಪಬ್ ಗಳಿಗೆ ಯಾವುದೇ ಡಿ ಜೆ ಪಾರ್ಟಿ ನಡೆಸಲು ಅನುಮತಿ ಪೊಲೀಸ್ ಇಲಾಖೆ ನೀಡಬಾರದು , ಎಲ್ಲಾ ಬಾರ್ ಪಬ್ ಗಳು ರಾತ್ರಿ 11:00ಗಂಟೆ ಒಳಗೆ ಮುಚ್ಚಬೇಕು ಎಂದು ಪೊಲೀಸ್ ಕಮೀಷನರಿಗೆ ಬಜರಂಗದಳ ಮನವಿ ಮಾಡಿತು, ಒಂದು ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ಪೊಲೀಸ್ ಇಲಾಖೆ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.

 


Spread the love