ಅಕ್ರಮವಾಗಿ ದನ ಸಾಗಾಟ – ಒರ್ವನ ಬಂಧನ

Spread the love

ಅಕ್ರಮವಾಗಿ ದನ ಸಾಗಾಟ – ಒರ್ವನ ಬಂಧನ

ಮಂಗಳೂರು: ಅಕ್ರಮವಾಗಿ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಸುಳ್ಯ ಪೊಲೀಸರು ದಾಳಿ ನಡೆಸಿ ಒರ್ವನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೊಡಗು ನಿವಾಸಿ ಅಬ್ದುಲ್ ಫಾರೂಕ್ (45) ಎಂದು ಗುರುತಿಸಲಾಗಿದೆ

ಜುಲೈ 14 ರಂದು ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಳ್ಯ ಕಸಬಾ ಗ್ರಾಮದ ಜ್ಯೋತಿ ಸರ್ಕಲ್ ಎಂಬಲ್ಲಿ KA 12B 5345 ಪಿಕಪ್ ವಾಹನದಲ್ಲಿ ಎರಡು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದುದನ್ನು ಸುಳ್ಯ ಪೊಲೀಸ್ ಠಾಣೆ ಉಪನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ತಡೆಯಲು ಯತ್ನಿಸಿದಾಗ ಪಿಕ್ಅಪ್ ಚಾಲಕ ಆರೋಪಿ ಕರಿಕೆ ಮನೆ ಮತ್ತು ಗ್ರಾಮ ಕೊಡಗು ಜಿಲ್ಲೆಯ ಅಬ್ದುಲ್ ಫಾರೂಕ್ (45) ಎಂಬಾತನು ತಪ್ಪಿಸಿಕೊಳ್ಳುವ ಯತ್ನದಲ್ಲಿ ಪೊಲೀಸರ ಜೀವಕ್ಕೆ ಹಾನಿಯಾಗುವಂತೆ ವಾಹನವನ್ನು ಪೊಲೀಸರ ಮೈಮೇಲೆ ಚಲಾಯಿಸಿ ಪರಾರಿಯಾಗಿರುವುದಾಗಿದೆ.

ಆತನನ್ನು ಪೊಲೀಸರು ಬೆನ್ನಟ್ಟಿದಾಗ ಪಿಕಪ್ ವಾಹನವನ್ನು ಇನ್ನೋರ್ವ ಆರೋಪಿ ಡಯಾನಾ ಎಂಬಾತನ ಮನೆಯ ಪಕ್ಕದಲ್ಲಿ ನಿಲ್ಲಿಸಿ ಡಯನಾನ ಮನೆಯ ಒಳಗೆ ಹೋಗಿದ್ದು ಡಯಾನಾನು ಮನೆಯ ಬಾಗಿಲನ್ನು ಹಾಕಿ ಸದರಿ ಆರೋಪಿಗೆ ಬೆಂಬಲವನ್ನು ನೀಡಿರುತ್ತಾರೆ.

ಸದರಿ ಸ್ಥಳದಿಂದ ಆರೋಪಿ ಅಬ್ದುಲ್ ಫಾರೂಕ್ ನನ್ನು ಬಂಧಿಸಿ ಆತನಲ್ಲಿದ್ದ ತಲವಾರು ಹಾಗೂ ಇತರೆ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡು ಸುಳ್ಯ ಪೊಲೀಸ್ ಪ್ರಕರಣ ದಾಖಲಾಗಿರುತ್ತದೆ.


Spread the love