ಅಕ್ರಮ ಗೋವು ಸಾಗಾಟ ಆರೋಪ : ಪ್ರಕರಣ ದಾಖಲು
ಮಂಗಳೂರು: ಮಲ್ಲೂರು ಗ್ರಾಮದ ಕಂಜಿಲಗೋಡಿ ಎಂಬಲ್ಲಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದವರನ್ನು ಶನಿವಾರ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕ ಅರುಣ್ ಕುಮಾರ್ ಸಿಬ್ಬಂದಿ ಪತ್ತೆ ಹಚ್ಚಿರುವ ಘಟನೆ ವರದಿಯಾಗಿದೆ.
ಮಲ್ಲೂರು ಗ್ರಾಮದ ಕಂಜಿಲಕೋಡಿ ಎಂಬಲ್ಲಿ ಗೂಡ್ಸ್ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಹಸು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.
ವಾಹನದ ಚಾಲಕ ಜೋಸೆಫ್ ನಿಲೇಶ್ ಡಿ ಅಲ್ಮೇಡಾ ಮತ್ತು ಕಣ್ಣೂರಿನ ಮಜೀದ್ ಎಂಬವರು ಕಣ್ಣೂರಿನಿಂದ ಕಲಾಯಿ ಕಡೆಗೆ ಯಾವುದೇ ಪರವಾನಿಗೆ ಇಲ್ಲದೇ ಹಸುವನ್ನು ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಸುವನ್ನು ವಶಕ್ಕೆ ಪಡದುಕೊಂಡು ನ್ಯಾಯಾಲಯದ ಅನುಮತಿ ಪಡೆದು ಗೋಶಾಲೆಗೆ ಹಸ್ತಾಂತರಿಸಲಾಗಿದೆ.
ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ವಿಜಯಕ್ರಾಂತಿ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಗವಿರಾಜ್, ಪಿಎಸ್‌ಐ ಅರುಣ್ ಕುಮಾರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.













