ಅಕ್ರಮ ಮಸಾಜ್ ಪಾರ್ಲರುಗಳ ಮೇಲೆ ಧಾಳಿ ನಾಲ್ವರ ಬಂಧನ

Spread the love

ಅಕ್ರಮ ಮಸಾಜ್ ಪಾರ್ಲರುಗಳ ಮೇಲೆ ಧಾಳಿ ನಾಲ್ವರ ಬಂಧನ

ಮಂಗಳೂರು: ನಗರದ ಎರಡು ಕಡೆ ಕಾರ್ಯಾಚರಿಸುತ್ತಿದ್ದ ಅನಧಿಕೃತ ಮಸಾಜ್ ಪಾರ್ಲರ್ ಗಳಿಗೆ ಕದ್ರಿ ಪೋಲಿಸರು ಧಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿ 7 ಯುವತಿಯರನ್ನು ರಕ್ಷಿಸಿದ್ದಾರೆ,

ಬಂಧಿತರನ್ನು ಕೇರಳದ ಸಿಜೇಶ್ (30), ಜೀವನ್ (21), ಎಡಪದವು ಪವನ್ (21), ಪುತ್ತೂರು ನಿವಾಸಿ ಸತೀಶ್ (29) ಎಂದು ಗುರುತಿಸಲಾಗಿದೆ.

ನಗರದ ಆರ್ಯಸಮಾಜ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ವೊಂದರಲ್ಲಿ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಮೇಲೆ ಧಾಳಿ ನಡೆಸಿದ ಕದ್ರಿ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಮತ್ತವರ ತಂಡ ಕೇರಳದ ಸಿಜೇಶ್ ಮತ್ತು ಜೀವನ್ ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ 3000 ರೂ ನಗದು ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದು, ಪಾರ್ಲರ್ ನಲ್ಲಿ ಕೆಲಸಮಾಡುತ್ತಿದ್ದ 4 ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ.

ಬೆಂದೂರ್ ವೆಲ್ ಅಪಾರ್ಟ್ ಮೆಂಟ್ ವೊಂದರ ತಳಮಹಡಿಯಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಇನ್ನೊಂದು ಮಸಾಜ್ ಪಾರ್ಲರ್ ಮೇಲೆ ಧಾಳಿ ನಡೆಸಿ ಪವನ್ ಮತ್ತು ಸತೀಶ್ ಅವರನ್ನು ಬಂಧಿಸಿ ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.


Spread the love