ಅಗಸ್ಟ್ 17 : ಉಡುಪಿ ಜಿಲ್ಲೆಯಲ್ಲಿ ; 270 ಮಂದಿಗೆ ಕೊರೋನಾ ಪಾಸಿಟಿವ್, 520 ನೆಗೆಟಿವ್

Spread the love

ಅಗಸ್ಟ್ 17 : ಉಡುಪಿ ಜಿಲ್ಲೆಯಲ್ಲಿ ; 270 ಮಂದಿಗೆ ಕೊರೋನಾ ಪಾಸಿಟಿವ್, 520 ನೆಗೆಟಿವ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೋಮವಾರ ಒಟ್ಟು 270 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 8238 ಕ್ಕೆ ಏರಿಕೆಯಾಗಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 569 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸೋಮವಾರ 520 ವರದಿಗಳು ನೆಗೆಟಿವ್ ಬಂದಿದ್ದು, 270 ಪಾಸಿಟಿವ್ ಬಂದಿವೆ. 870 ವರದಿಗಳು ಬರುವುದು ಬಾಕಿ ಇದೆ.

ಜಿಲ್ಲೆಯಲ್ಲಿ ಸೋಮವಾರ 269 ಮಂದಿ ಗುಣಮುಖರಾಗಿದ್ದು ಇದುವರೆಗೂ 5630 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2537 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಇದುವರೆಗೆ ಕೊರೋನಾದಿಂದ ಒಟ್ಟು 78ಮಂದಿ ಸಾವನಪ್ಪಿದ್ದಾರೆ


Spread the love