ಅಡ್ಯಾರ್ ತಜಿಪೋಡಿಯಲ್ಲಿ ಗೋ ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ

Spread the love

ಅಡ್ಯಾರ್ ತಜಿಪೋಡಿಯಲ್ಲಿ ಗೋ ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ

ಮಂಗಳೂರು: ಅಡ್ಯಾರ್ ತಜಿಪೋಡಿ ಪ್ರದೇಶದಲ್ಲಿ ನಡೆದ ಗೋ ಕಳ್ಳತನ ಪ್ರಕರಣದಲ್ಲಿ ಮೂವರನ್ನು ಕಂಕನಾಡಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ವಿವರ:
ಸೆಪ್ಟೆಂಬರ್ 13ರ ಬೆಳಗಿನ ಜಾವ ಉಮೇಶ್ ಆಳ್ವ ಅವರ ಮನೆಯ ಅಂಗಳದಿಂದ ಕ್ರಾಸ್ ಜರ್ಸಿ ಹಸುವನ್ನು ಕಳವು ಮಾಡಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ. 144/2025, ಕಲಂ 303(2) ಐಪಿಸಿ) ದಾಖಲಾಗಿತ್ತು.

ಬಂಧಿತರು:

ಶಾಬಾಜ್ ಅಹಮ್ಮದ್ (ಗಾಣದಬೆಟ್ಟು ಮನೆ, ಅಡ್ಯಾರ್, ಕಣ್ಣುರು)

ಮೊಹಮ್ಮದ್ ಸುಹಾನ್ (ಅರ್ಕುಳ, ವಳಚ್ಚಿಲ್)

ವಳಚ್ಚಿಲ್ ಖಾದರ್ ಮೊಹಮ್ಮದ್ @ ಕೋಳಿ ಮೋನಕ್ಕ (ಅಡ್ಯಾರ್)

ಪೊಲೀಸರ ತನಿಖೆಯಲ್ಲಿ ಶಾಬಾಜ್ ಮತ್ತು ಸುಹಾನ್ ಅವರು ದನವನ್ನು ಕಳವು ಮಾಡಿ, ಅದನ್ನು ಖಾದರ್ ಮೊಹಮ್ಮದ್‌ಗೆ ಮಾರಾಟ ಮಾಡಿರುವುದು ಬಹಿರಂಗವಾಗಿದೆ. ಆತನು ದನವನ್ನು ಮಾಂಸ ಮಾಡಲು ಖರೀದಿಸಿದ್ದಾನೆಂದು ತಿಳಿದುಬಂದಿದೆ. ಪೊಲೀಸರು ದನವನ್ನು ಜೀವಂತವಾಗಿ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಹಿಂದಿನ ಅಪರಾಧ ದಾಖಲೆಗಳು:

ಶಾಬಾಜ್ ಅಹಮ್ಮದ್ ವಿರುದ್ಧ ಈಗಾಗಲೇ ಮಂಗಳೂರು ಗ್ರಾಮಾಂತರ ಮತ್ತು ಕಂಕನಾಡಿ ಠಾಣೆಗಳಲ್ಲಿ ಕೊಲೆ, ಕೊಲೆಪ್ರಯತ್ನ ಹಾಗೂ ದೊಂಬಿ ಪ್ರಕರಣಗಳು ದಾಖಲಾಗಿವೆ.

ಮೊಹಮ್ಮದ್ ಸುಹಾನ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಖಾದರ್ ಮೊಹಮ್ಮದ್ ವಿರುದ್ಧ 2024ರಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಗೋ ಹತ್ಯೆ ಪ್ರಕರಣ ದಾಖಲಾಗಿತ್ತು.

ಮುಂದಿನ ಕ್ರಮ:
ಆರೋಪಿಗಳು ದನವನ್ನು ವಳಚ್ಚಿಲ್ ಅಬ್ದುಲ್ ಖಾದರ್ ಅವರ ಮನೆಯಲ್ಲಿ ಇರುವ ಶೆಡ್‌ನಲ್ಲಿ ಹತ್ಯೆ ಮಾಡಿ ಮಾಂಸ ಮಾಡಲು ಸಿದ್ಧತೆ ನಡೆಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ, ಸದ್ರಿ ಜಾಗವನ್ನು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದೇಶ – 2020ರ ಅನ್ವಯ ಜಪ್ತಿ ಮಾಡಿ, ಸರಕಾರಕ್ಕೆ ಮುಟ್ಟುಗೋಲು ಹಾಕುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.


Spread the love
Subscribe
Notify of

0 Comments
Inline Feedbacks
View all comments