ಅತ್ಯಾಚಾರ ಕೇಸ್ ನಲ್ಲಿ ರೌಡಿ ಶೀಟರ್ ಅನಿಲ್ ರಾಜ್ ಬಂಧನ

Spread the love

ಅತ್ಯಾಚಾರ ಕೇಸ್ ನಲ್ಲಿ ರೌಡಿ ಶೀಟರ್ ಅನಿಲ್ ರಾಜ್ ಬಂಧನ

ಬೆಂಗಳೂರು: 22 ವರ್ಷದ ಅಮಾಯಕ ಹುಡುಗಿ ನಯನ (ಹೆಸರು ಬದಲಾಯಿಸಿದೆ) ಎಂಬಾಕೆಯನ್ನ ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ರೌಡಿ ಶೀಟರ್ ಅನಿಲ್ ರಾಜ್ ನನ್ನು ಯಲಹಂಕ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಓದಲು ಬರೆಯಲು ಬಾರದಿದ್ದರೂ ಮಾಸಿಕ ಪತ್ರಿಕೆಯೊಂದರ ಸಂಪಾದಕ ಎಂದು ಹೇಳಿಕೊಳ್ಳುತ್ತಿದ್ದ ಈತ ಅದೇ ಮಾಸಿಕ ಪತ್ರಿಕೆಯಲ್ಲಿ ವರದಿಗಾರಳಾಗಿ ಕೆಲಸ ಮಾಡುತ್ತಿದ್ದ ನಯನ ಎಂಬ ಹುಡುಗಿಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ ಆರೋಪ ಈತನ ಮೇಲಿತ್ತು. ಅಲ್ಲದೆ ಪತ್ರಿಕೆಯನ್ನು ತನ್ನ ಅಕ್ರಮ ದಂಧೆಗಳ ರಕ್ಷಣೆಗೆ ಹಾಗೂ ಅಧಿಕಾರಿಗಳು, ಸಾರ್ವಜನಿಕರಿಂದ ಹಣ ವಸೂಲಿಗಾಗಿ ಬಳಸಿಕೊಳ್ಳುತ್ತಿದ್ದ ಈತ ಯಲಹಂಕ ಮಿನಿ ವಿಧಾನಸೌಧ, ಬಿಬಿಎಂಪಿ ಸೇರಿದಂತೆ ಇತರೆ ಅಧಿಕಾರಿಗಳ ಬಳಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ.

ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ಈತನ ವಿರುದ್ಧ ರೌಡಿ ಶೀಟರ್ ಆರೋಪಿಯಾಗಿದ್ದ ಈತನನ್ನು ಐಪಿಎಸ್ ಸೆಕ್ಷನ್ 354A, 341, 376, 509 ಮತ್ತು 506 ಅಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.


Spread the love