ಅಶ್ರಫ್ ಕೊಲೆ ಆರೋಪಿಗಳು ಬಂಟ್ವಾಳದಲ್ಲಿ ಕೋಮುಗಲಭೆ ಸೃಷ್ಟಿಸುವ ಉದ್ದೇಶವಿತ್ತು; ಐಜಿಪಿ ಹರಿಶೇಖರನ್
ಮಂಗಳೂರು: ಅಶ್ರಫ್ ಕಲಾಯಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಬಂಧಿಸಿದ್ದು ಬಂಟ್ವಾಳದಲ್ಲಿ ಕೋಮು ಘರ್ಷಣೆ ನಡೆಸುವುದೇ ಆರೋಪಿಗಳ ಉದ್ದೇಶವಾಗಿತ್ತು ಎಂದು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ನು ಹೇಳಿದರು.
ra
ಶನಿವಾರ ಅವರ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜೂನ್ 21 ರಂದು ಬೆಳಿಗ್ಗೆ 11.30 ರ ಸುಮಾರಿಗೆ 6-7 ಮಂದಿ ಯುವಕರು ಬೈಕಿನಲ್ಲಿ ಬಂದು ಅಶ್ರಫ್ ಕಲಾಯಿ ಅವರನ್ನು ಕೊಲೆಗೈದಿದ್ದರು, ಈಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಘಟನೆಯ ಬಳಿಕ 4 ತಂಡಗಳನ್ನು ರಚಿಸಿ ತನಿಖೆ ಕೈಗೊಂಡಿದ್ದು, ಈ ವರೆಗೆ 5 ಮಂದಿಯನ್ನು ಬಂಧಿಸಲಾಗಿದೆ.
ಆರೋಪಿಗಳ ಪೈಕಿ ಸಂತೋಷ್ ಅಲಿಯಾಸ್ ಸಂತು ಮೇಲೆ ಕ್ರಿಮಿನಲ್ ಹಿನ್ನಲೆಯಿದ್ದು, ಅಭಿನ್ ರಾಜ್ ಟಿಪ್ಪು ಗಲಭೆಯಲ್ಲಿ, ಶಿವಪ್ರಸಾದ್ ತುಂಬೆ ಕೋಮು ಗಲಭೆಯಲ್ಲಿ ರಂಜಿತ್ ಮತ್ತು ಪವನ್ ಕೂಡ ಕೋಮು ಸಂಬಂಧಿತ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
ಅಶ್ರಫ್ ಕೊಲೆಯಲ್ಲಿ ಭರತ್ ಮತ್ತು ದಿವ್ಯರಾಜ್ ಕೊಲೆಯ ಮುಖ್ಯ ರೂವಾರಿಗಳಾಗಿದ್ದು, ಘಟನೆಯ ಬಳಿಕ ಎಲ್ಲಾ ಆರೋಪಿಗಳು ನಾಪತ್ತೆಯಾಗಿದ್ದರು. ಆರೋಪಿಗಳನ್ನು ಪಡುಬಿದ್ರೆ ಬಳಿ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕೋಮು ಪ್ರಚೋದಿತ ಪ್ರಕರಣದಲ್ಲಿ ಭಾಗಿಯಾಗಿರುವ 20 ಮಂದಿಯ ವಿರುದ್ದ ಗೂಂಡಾ ಕಾಯ್ದೆ ಹಾಕುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.













