ಅಸ್ಟ್ರೋ ಮೋಹನ್ ಅವರಿಗೆ ಜಪಾನಿನ ಟಿಫಾ ಛಾಯಾಚಿತ್ರ ಪ್ರಶಸ್ತಿ

Spread the love

ಅಸ್ಟ್ರೋ ಮೋಹನ್ ಅವರಿಗೆ ಜಪಾನಿನ ಟಿಫಾ ಛಾಯಾಚಿತ್ರ ಪ್ರಶಸ್ತಿ

ಉಡುಪಿ: ಜಪಾನಿನ ಟೋಕಿಯೂ ಇಂಟರ್‍ನ್ಯಾಷನಲ್ ಫೋಟೋಗ್ರಾಫಿ ಆವಾರ್ಡ್ಸ್ (ಟಿಫಾ) ಆಯೋಜಿಸಿದ್ದ ಪ್ರಥಮ ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಉಡುಪಿ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರ ಛಾಯಾಚಿತ್ರ ಕೃತಿ `ಮೆಟೊಮೋಫಸಸ್’ ಗೆ ಹಾನರೇಬಲ್ ಮೆನ್ಷನ್ ಪ್ರಶಸ್ತಿ ಲಭಿಸಿದೆ.

astro-mohan

astro-tifa3

ಪೀಪಲ್ ಮತ್ತು ಕಲ್ಚರ್ ವಿಭಾಗದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಪ್ರಾಪ್ತವಾಗಿದೆ. ಸುಮಾರು 70 ದೇಶಗಳಿಂದ ಮೂರು ಸಾವಿರಕ್ಕೂ ಅಧಿಕ ಛಾಯಾಗ್ರಾಹಕರು ಸ್ಪರ್ಧೆಗೆ ಭಾಗವಹಿಸಿದ್ದರು ಎಂದು ಟಿಫಾ ತನ್ನ ವರದಿಯಲ್ಲಿ ತಿಳಿಸಿದೆ.


Spread the love