ಆಳ್ವಾಸ್ ಕಾಲೇಜ್ ಮತ್ತು ಮಂಗಳೂರಿನ ವಿ ಅಂಡ್ ಜಿ ಇಂಡಸ್ಟ್ರೀಸ್ ಟೆಸ್ಟಿಂಗ್ ಲ್ಯಾಬೊರೋಟರಿಸ್ ಪ್ರೈ.ಲಿ ನಡುವೆ ಒಡಂಬಡಿಕೆಗೆ ಸಹಿ

Spread the love

ಆಳ್ವಾಸ್ ಕಾಲೇಜ್ ಮತ್ತು ಮಂಗಳೂರಿನ ವಿ ಅಂಡ್ ಜಿ ಇಂಡಸ್ಟ್ರೀಸ್ ಟೆಸ್ಟಿಂಗ್ ಲ್ಯಾಬೊರೋಟರಿಸ್ ಪ್ರೈ.ಲಿ ನಡುವೆ ಒಡಂಬಡಿಕೆಗೆ ಸಹಿ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಮಂಗಳೂರಿನ ವಿ ಅಂಡ್ ಜಿ ಇಂಡಸ್ಟ್ರೀಸ್ ಟೆಸ್ಟಿಂಗ್ ಲ್ಯಾಬೊರೋಟರಿಸ್ ಪ್ರೈ.ಲಿನ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ ಪೀಟರ್ ಫೆರ್ನಾಂಡೀಸ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಗಿರೀಶ್ ಬಾಬು ಒಡಂಬಡಿಕೆಗೆ ಸಹಿ ಹಾಕಿದರು.

ಈ ಒಡಂಬಡಿಕೆಯ ಪ್ರಕಾರ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಟ್ರೈನಿಂಗ್ ಮತ್ತು ಸರ್ಟಿಫಿಕೇಶನ್ ಕೋರ್ಸುಗಳನ್ನು ಕಾಲೇಜಿನಲ್ಲಿ ಆರಂಭಿಸಿಲಾಗುತ್ತದೆ. ಜತೆಗೆ ಎನ್.ಡಿ.ಟಿ ತಂತ್ರಜ್ಞಾನದ ಟ್ರೈನಿಂಗ್ ಮತ್ತು ಸರ್ಟಿಫಿಕೇಶನ್ ಕೋರ್ಸು ಆರಂಭಿಸಲಾಗುತ್ತದೆ. ಸಂಶೋಧನಾ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹೆಚ್ಚಿನ ಮನ್ನಣೆಯನ್ನು ನೀಡಲಾಗುವುದು.

ಈ ಸಂದರ್ಭದಲಿ ್ಲ ಕಾಲೇಜಿನ ಡೀನ್ ಡಾ. ಪ್ರವೀಣ್ ಜೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ್, ಪ್ರಾಧ್ಯಪಕ ಕೆ.ವಿ ಸುರೇಶ್ ಮತ್ತು ವಿ ಅಂಡ್ ಜಿ ಯ ವೆಂಕಟ ಸುಬ್ರಮಣಿಯನ್ ಉಪಸ್ಥಿತರಿದ್ದರು.


Spread the love