ಆಳ್ವಾಸ್ ಪದವಿ ಕಾಲೇಜಿನ ಪ್ರಾಧ್ಯಾಪಕಿ ಸಪ್ನಾ ಗೆ ಪಿ.ಎಚ್.ಡಿ
ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕಿ ಸಪ್ನಾ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿ ನೀಡಿದೆ.

ಮಂಗಳೂರಿನ ಸ್ಕೂಲ್ ಆಫ್ ಸೋಷಲ್ ವರ್ಕ್, ರೋಶಿನಿ ನಿಲಯ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ. ಜೆಸಿಂತಾ ಡಿಸೋಜರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎ ಸ್ಟಡಿ ಆನ್ ಪ್ರೋಬ್ಲಮ್ಸ್ ಆಫ್ ವುಮೆನ್ ಲೆಕ್ಚರರ್ಸ್ ಇನ್ ಡಿಗ್ರಿ ಕಾಲೇಜಸ್ ಎಫೀಲಿಯೇಟೆಡ್ ಟು ಮಂಗಳೂರು ಯುನಿರ್ವಸಿಟಿ” ಎಂಬ ವಿಷಯಕ್ಕೆ ಪಿ.ಎಚ್.ಡಿ ಪದವಿ ಲಭಿಸಿದೆ. ಇವರು ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದಲ್ಲಿ 14 ವರ್ಷಗಳಿಂದ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೂಡುಬಿದರೆಯ ನಿವಾಸಿ ಎಮ್. ಭೋಜರಾಜ್ ಪೂವಣಿ ಮತ್ತು ವತ್ಸಲಾ ದಂಪತಿಯ ಪುತ್ರಿ ಹಾಗೂ ಪದ್ಮರಾಜ್ ಆಳ್ವ ಹಾಗೂ ಸರಸ್ವತಿ ಯವರ ಸೊಸೆ. ಕಮರ್ಶಿಯಲ್ ಅಕೌಂಟೆಂಟ್ ಪಾಶ್ರ್ವನಾಥ್ ಆಳ್ವ ಅವರ ಪತ್ನಿ.













