ಆಸ್ಟ್ರೋ ಮೋಹನ್ ಅವರಿಗೆ ಇಂಡಿಯಾ ಇಂಟರ್‍ನ್ಯಾಷನಲ್ ಪೋಟೋಗ್ರಾಫಿ ಕೌನ್ಸಿಲ್‍ನ ಫೆಲ್ಲೋಶಿಪ್

Spread the love

ಆಸ್ಟ್ರೋ ಮೋಹನ್ ಅವರಿಗೆ ಇಂಡಿಯಾ ಇಂಟರ್‍ನ್ಯಾಷನಲ್ ಪೋಟೋಗ್ರಾಫಿ ಕೌನ್ಸಿಲ್‍ನ ಫೆಲ್ಲೋಶಿಪ್

ಉಡುಪಿ : ಫೋಟೋಗ್ರಾಫಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿಕೊಂಡು ಬರುತ್ತಿರುವ ಉದಯವಾಣಿ ಪತ್ರಿಕೆಯ ಹಿರಿಯ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರಿಗೆ ಇಂಡಿಯಾ ಇಂಟರ್‍ನ್ಯಾಷನಲ್ ಪೋಟೋಗ್ರಾಫಿ ಕೌನ್ಸಿಲ್‍ನ ಫೆಲ್ಲೋಶಿಪ್ ಪದವಿಯನ್ನು ಪಡೆದುಕೊಂಡಿದ್ದಾರೆ.

23ವರ್ಷಗಳ ಪತ್ರಿಕಾ ಛಾಯಾಗ್ರಹಣ ಮತ್ತು ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಇವರ ಸಾಧನೆಯನ್ನು ಪರಿಗಣಿಸಿ ಫೆಲ್ಲೋಶಿಪ್ ನೀಡಲಾಗುತ್ತಿದೆ.

ವಿಶ್ವ ಛಾಯಾಗ್ರಹಣದ ದಿನ ಆ. 19ರಂದು ಹೊಸದಿಲ್ಲಿಯಲ್ಲಿ ಜರಗುವ ಸಮಾರಂಭದಲ್ಲಿ ಫೆಲ್ಲೋಶಿಪ್ ಪದವಿಯನ್ನು ನೀಡಲಾಗುತ್ತದೆ. ವಿಶೇಷವೇನೆಂದರೆ ಕಳೆದ ತಿಂಗಳಷ್ಟೆ ಆಸ್ಟ್ರೋಮೋಹನ್ ಅವರಿಗೆ ಇಮೇಜ್ ಕೋಲಿಗ್ ಸೊಸೈಟಿಯ ಆಫ್ ಅಮೆರಿಕಾ ಸಂಸ್ಥೆಯೂ ಇವರಿಗೆ ಫೆಲ್ಲೋಶಿಪ್ ಪದವಿಯನ್ನು ನೀಡಿತ್ತು.


Spread the love