ಈದುಲ್ ಫಿತ್ರ್ ಎಲ್ಲರಿಗೂ ಸಂತೋಷ ತರಲಿ – ಉಡುಪಿ ಜಿಲ್ಲಾ ಖಾಝಿ ಬೇಕಲ ಉಸ್ತಾದ್ ಈದ್ ಸಂದೇಶ
ಉಡುಪಿ: ಈದುಲ್ ಫಿತ್ರ್ ದಿನದಂದು ನೀಡಬೇಕಾದ ಕಡ್ಡಾಯ ದಾನಕ್ಕೆ ಫಿತ್ರ್ ಝಕಾತ್ ಎನ್ನುತ್ತಾರೆ. ಉಪವಾಸ ಆಚರಣೆಯ ತಿಂಗಳಾಗಿರುವ ರಂಝಾನ್ ಮುಕ್ತಾಯವಾಗುವುದರೊಂದಿಗೆ ಕಡ್ಡಾಯವಾದ ದಾನ ಮಾಡು ವುದೇ ಫಿತ್ರ್ ಝಕಾತ್. ಫಿತ್ರ್ ಅಂದರೆ ಉಪವಾಸ ಮುಕ್ತಾಯಗೊಳಿಸುವುದು ಎಂಬುದು ಅರ್ಥ. ಈದ್ ಮಹತ್ವ ತುಂಬಿದ ಆರಾಧನೆಯಾಗಿದೆ.

ಉಪವಾಸದ ಕೊರತೆಗಳಿಗೆ ಫಿತ್ರ್ ಝಕಾತ್ ಪರಿಹಾರವಾಗುವುದು. ಆದು ದರಿಂದ ಈ ಹಬ್ಬಕ್ಕೆ ಈದುಲï ಫಿತ್ರ್ ಎಂಬ ಹೆಸರು. ಈ ಹಬ್ಬವು ಅಲ್ಲಾಹ್ ಗಾಗಿ ಇರಬೇಕೆಂಬ ಉದಾತ್ತ ಸಂದೇಶ ಇದರಲ್ಲಿದೆ. ನನಗೆ ಬೇಕಾಗಿ ಸ್ನೇಹ ಸೌಹಾರ್ದ ಬೆಳಸುವವರಿಗೆ, ನನಗೆ ಬೇಕಾಗಿ ಪರಸ್ಪರ ಸಂದರ್ಶನ ನಡೆಸುವವ ರಿಗೆ, ನನಗೆ ಬೇಕಾಗಿ ಅನ್ಯೋನ್ಯ ಔದಾರ್ಯ ತೋರುವವರಿಗೆ ಮತ್ತು ನನಗೆ ಬೇಕಾಗಿ ವಿಶ್ವಾಸ ಪ್ರಾಮಾಣಿಕತೆಯನ್ನು ಬೆಳಸಿಕೊಂಡವರಿಗೆ ನನ್ನ ಅನನ್ಯ ಪ್ರೇಮವು ಖಚಿತವಾಗಿದೆ ಎಂಬ ಅಲ್ಲಾಹನ ಆದೇಶವಾಗಿದೆ.
ಹಬ್ಬದ ದಿನ ಸ್ನೇಹ ಸೌಹಾರ್ದ ಬೆಳಸುವುದರ ಜೊತೆಗೆ ಬಡವರಿಗೆ ಔದಾರ್ಯವನ್ನು ತೋರುವುದು ಮತ್ತು ಸಂದರ್ಶಿಸುವುದು ಅಲ್ಲಾಹನ ತೃಪ್ತಿ ದಾಸನ ಪಾಲಿಗೆ ಸಿಗುವ ಅತೀದೊಡ್ಡ ಭಾಗ್ಯ. ಆ ತೃಪ್ತಿ ಸಿಕ್ಕಿದವರು ಗೆದ್ದೇ ಗೆಲ್ಲುತ್ತಾರೆ. ಆದರೆ ಒಂದೊಮ್ಮೆ ತೃಪ್ತಿ ಸಿಗದೇ ಹೋದರೆ, ಅವರಿಗೆ ಕನಿಷ್ಠ ಪಕ್ಷ ಕ್ಷಮೆಯಾದರೂ ಸಿಗಬೇಕು. ಕ್ಷಮೆ ಮತ್ತು ತೃಪ್ತಿ ಒಂದೊಕ್ಕೊಂದು ಪೂರಕವಾದರೂ ಭಿನ್ನತೆ ಕೂಡ ಇದೆ. ತೃಪ್ತಿ ಪಟ್ಟಲ್ಲಿ ಕ್ಷಮೆಯೂ ಸಿಗುತ್ತದೆ. ಅಲ್ಲಾಹನ ತೃಪ್ತಿಗಾಗಿ ನಾವು ಎಲ್ಲಾ ಸಂಭ್ರಮಗಳನ್ನು ಆಚರಿಸಬೇಕು ಧರ್ಮಕ್ಕೆ ವಿರೋಧ ರೀತಿಯಲ್ಲಿ ನಮ್ಮ ಹಬ್ಬಗಳನ್ನು ಆಚರಿಸಿ ಅಲ್ಲಾಹನ ಕೋಪಕ್ಕೆ ಗುರಿಯಾಗಬಾರದು. ನಮ್ಮ ಮನೆಯಲ್ಲಿ ಹಬ್ಬವನ್ನು ಸಂತೋಷದಿಂದ ಆಚರಿಸುವಾಗ ನೆರೆಮನೆಯವರನ್ನು ಕೂಡ ನೋಡಬೇಕು. ಹಬ್ಬದ ಸಂಭ್ರಮವು ಇತರ ಧರ್ಮವರಿಗೆ ಮುಳ್ಳಾಗಬಾರದು.
-ಅಲ್ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಸಂಯುಕ್ತ ಜಮಾಅತ್ ಖಾಝಿ, ಉಡುಪಿ ಜಿಲ್ಲೆ.













