Spread the love
ಉಚ್ಚಿಲ ದಸರಾ 2025: ಜನರ ಮನಸೂರೆಗೊಳಿಸಿದ ಗುರುಕಿರಣ್ ನೈಟ್ಸ್
ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಉಡುಪಿ – ಉಚ್ಚಿಲ ದಸರಾ 2025 ಇದರ ಅಂಗವಾಗಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ತಂಡದವರಿಂದ ಗುರುಕಿರಣ್ ನೈಟ್ಸ್ ಸಂಗೀತ ಕಾರ್ಯಕ್ರಮ ಜರಗಿತು.
ಸುಮಾರು ಎರಡು ತಾಸುಗಳ ಸಂಗೀತ ಕಾರ್ಯಕ್ರಮದಲ್ಲಿ ಗುರುಕಿರಣ್ ಸೇರಿದ್ದಂತೆ ಖ್ಯಾತ ಗಾಯಕರಿಂದ ಕನ್ನಡ, ತುಳು, ಹಿಂದಿ ಭಾಷೆಯ ಹಾಡುಗಳು ಜನಮನಸೂರೆಗೊಂಡವು.
ಈ ಸಂದರ್ಭ ಗುರುಕಿರಣ್ ತನ್ನ ಮಾತೃ ಭಾಷೆ ತುಳುವಿನಲ್ಲಿ ಮಾತನಾಡುವುದರ ಜೊತೆಗೆ ಹಳೆಯ ದಿನಗಳು ಹಾಗೂ ಪುನೀತ್ ರಾಜ್ ಕುಮಾರ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು.ಕಿರಿಯರು ಹಿರಿಯರೆನ್ನದೇ ಎಲ್ಲರೂ ಇವರ ಹಾಡಿನ ಮೋಡಿಗೆ ತಲೆದೂಗಿದರು.
Spread the love