ಉಜಿರೆಯಲ್ಲಿ ಮುಖ ಗಮ್ ಟೇಪಿನಿಂದ ಮುಚ್ಚಿದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆ ; ಕೊಲೆ ಶಂಕೆ

Spread the love

ಉಜಿರೆಯಲ್ಲಿ ಮುಖ ಗಮ್ ಟೇಪಿನಿಂದ ಮುಚ್ಚಿದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆ ; ಕೊಲೆ ಶಂಕೆ

ಬೆಳ್ತಂಗಡಿ: ಮುಖಕ್ಕೆ ಗಮ್ ಟೇಪ್ ಸುತ್ತಿದ ಸ್ಥಿತಿಯಲ್ಲಿ ಸುಮಾರು 29 ವರ್ಷ ವಯಸ್ಸಿನ ಅಪರಿಚಿತ ಯುವಕನೋರ್ವನ ಶವ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಗುರಿಪಳ್ಳ ಕ್ರಾಸ್ ಅಳಕೆ ರಸ್ತೆ ಸಮೀಪ ಭಾನುವಾರ ಪತ್ತೆಯಾಗಿದೆ.

ಮೃತದೇಹದ ಮುಖವನ್ನು ಗಮ್ ಟೇಪಿನಿಂದ ಸಂಪೂರ್ಣ ಸುತ್ತಿದ್ದು ಕಾಲುಗಳನ್ನು ಕಟ್ಟಲಾಗಿದೆ. ಯುವಕನ್ನನ್ನು ದುಷ್ಕರ್ಮಿಗಳು ಬೇರೆ ಕಡೆಯಲ್ಲಿ ಹತ್ಯೆಗೈದು ಮೃತದೇಹವನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಬೆಳ್ತಂಗಡಿ ಇನ್ಸ್ ಪೆಕ್ಟರ್ ರವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love