ಉಡುಪಿ: ಕೋವಿಡ್-19 ಹೆಲ್ಪ್ ಲೈನ್ ಕಾಲ್ ಸೆಂಟರ್ ಮೊಬೈಲಿಗೆ ಅಶ್ಲೀಲ ವೀಡಿಯೊ ರವಾನೆ –ದೂರು ದಾಖಲು

Spread the love

ಉಡುಪಿ: ಕೋವಿಡ್-19 ಹೆಲ್ಪ್ ಲೈನ್ ಕಾಲ್ ಸೆಂಟರ್ ಮೊಬೈಲಿಗೆ ಅಶ್ಲೀಲ ವೀಡಿಯೊ ರವಾನೆ –ದೂರು ದಾಖಲು

ಉಡುಪಿ: ಕೋವಿಡ್ -16 ಸಂಬಂಧಿಸಿ, ಸಾರ್ವಜನಿಕ ಉಪಯೋಗಕ್ಕೆ ಕಾಲ್ ಸೆಂಟರ್ ಮೊಬೈಲ್ ಸಂಖ್ಯೆಗೆ ಅಶ್ಲೀಲ ವೀಡಿಯೋ ಹಾಕಿದ ವ್ಯಕ್ತಿಯ ವಿರುದ್ದ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಏಪ್ರೀಲ್ 6ರಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಸುಧೀರ್ ಸೂಡ ಅವರು ಉಡುಪಿ ಸೆನ್ ಅಪರಾಧ ಠಾಣೆಗೆ ಲಿಖಿತ ದೂರು ನೀಡಿದ್ದು ವಿವರ ಇಂತಿದೆ. ಕೋವಿಡ್-19 ಸಂಬಂಧಿಸಿ ಸಾರ್ವಜನಿಕ ಉಪಯೋಗಕ್ಕೆ ಕಾಲ್ ಸೆಂಟರ್ ತೆರೆದಿದ್ದು, ಅದರ ಸಂಖ್ಯೆಗಳನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಿಲಾಗಿತ್ತು. ಏಪ್ರಿಲ್ 3ರಂದು ರಾತ್ರಿ 8.57ಕ್ಕೆ ವ್ಯಕ್ತಿಯೊಬ್ಬ ತನ್ನ ಮೊಬೈಲ್ ನಿಂದ ಕಾಲ್ ಸೆಂಟರ್ ಮೊಬೈಲ್ ಗೆ ಅಶ್ಲೀಲ ವಿಡಿಯೋಗಳನ್ನು ಹಾಕಿದ್ದು ಇದರಿಂದ ಕಾಲ್ ಸೆಂಟರ್ ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಮುಜುಗರ ಉಂಟಾಗಿದ್ದು, ಈ ಬಗ್ಗೆ ಸದ್ರಿ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.

ದೂರನ್ನು ಸ್ವೀಕರಿಸಿರುವ ಸೆನ್ ಪೊಲೀಸರು ಕಲಂ 67, 67(A) ಐ.ಟಿ. ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love