ಉಡುಪಿ ಜಿಲ್ಲಾಧಿಕಾರಿಯಿಂದ ಅನ್ ಲಾಕ್ 3 ಮಾರ್ಗಸೂಚಿ ಬಿಡುಗಡೆ: ಅ. 5ರಿಂದ ಯೋಗ ಕೇಂದ್ರ ಜಿಮ್ನಾಷಿಯಂ ಗಳನ್ನು ತೆರೆಯಲು ಅವಕಾಶ

Spread the love

ಉಡುಪಿ ಜಿಲ್ಲಾಧಿಕಾರಿಯಿಂದ ಅನ್ ಲಾಕ್ 3 ಮಾರ್ಗಸೂಚಿ ಬಿಡುಗಡೆ: ಅ. 5ರಿಂದ ಯೋಗ ಕೇಂದ್ರ ಜಿಮ್ನಾಷಿಯಂ ಗಳನ್ನು ತೆರೆಯಲು ಅವಕಾಶ

ಉಡುಪಿ: ಕೇಂದ್ರ ಸರ್ಕಾರ, ರಾಜ್ಯ ಸರಕಾರ ಅನ್ ಲಾಕ್-3 ಮಾರ್ಗಸೂಚಿ ಬಿಡುಗಡೆ ಮಾಡಿದ ಬಳಿಕ ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಸಹ ಜಿಲ್ಲೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅಗಸ್ಟ್ 5 ರಿಂದ ಜಿಲ್ಲೆಯಲ್ಲಿ ಯೋಗ ಕೇಂದ್ರಗಳನ್ನು ಮತ್ತು ಜಿಮ್ನಾಷಿಯಂಗಳನ್ನು ತೆರೆಯಲು ಅವಕಾಶ ನೀಡಿದ್ದಾರೆ .

A) ಕಂಟೈನ್ ಮೆಂಟ್ ವಲಯಗಳಲ್ಲಿ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು.

  1. ಕಂಟೈನ್ ಮೆಂಟ್ ವಲಯಗಳಲ್ಲಿ ಸಂಪೂರ್ಣ ಲಾಕ್ ಡೌನ್ ದಿನಾಂಕ:31.08.2020 ರವರೆಗೆ ಇರುತ್ತದೆ.
  2.  ವೈದ್ಯಕೀಯ ತುರ್ತು ಸೇವೆಗಳು ಮತ್ತು ಅವಶ್ಯಕತೆಗಳು ಹಾಗೂ ಅಗತ್ಯ ವಸ್ತುಗಳು ಮತ್ತು ಸೇವೆಗಳ ಪೂರೈಕೆಗಳನ್ನು ಕಾಪಾಡಿಕೊಳ್ಳಲು ಅನುಮತಿಯನ್ನು ನೀಡಲಾಗಿದೆ.ಇವುಗಳ ಹೊರತು ಕಂಟೈನ್ ಮೆಂಟ್ ವಲಯದ ಒಳಗೆ ಹಾಗೂ ಹೊರಗೆ ಜನರ ಚಲನ ವಲನಗಳನ್ನು ನಿಷೇಧಿಸಲಾಗಿದೆ.

B) ಕಂಟೈನ್ ಮೆಂಟ್ ವಲಯಗಳ ಹೊರಗಿನ ಪ್ರದೇಶದಲ್ಲಿ ಚಟುವಟಿಕೆಗಳು :ಕಂಟೈನ್ ಮೆಂಟ್ ವಲಯಗಳ ಹೊರಗಿನ ಪ್ರದೇಶದಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ಹೊರತು ಪಡಿಸಿ ಎಲ್ಲಾ ಚಟುವಟಿಕೆಗಳನ್ನು ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಾಲಕಾಲಕ್ಕೆ ಹೊರಡಿಸಿದ , ಸೂಚನೆಗಳು ಮತ್ತು ಕಾರ್ಯಾಚರಣೆಯ ಕಾರ್ಯವಿಧಾನಗಳ ಷರತ್ತುಗಳೊಂದಿಗೆ ನಡೆಸಲು ಅನುಮತಿಸಲಾಗಿದೆ.

(i) ಶಾಲೆಗಳು,ಕಾಲೇಜುಗಳು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು 31 ನೇ ಆಗಸ್ಟ್ 2020 ರವರೆಗೆ ತೆರೆಯಲು ಅವಕಾಶವಿಲ್ಲ. ಆನ್ ಲೈನ್ /ದೂರಶಿಕ್ಷಣ ಕಲಿಕೆಗಳಿಗೆ ಅನುಮತಿಸುವುದನ್ನು ಮುಂದುವರಿಸಲಾಗುವುದು ಮತ್ತು ಪ್ರೋತ್ಸಾಹಿಸಲಾಗುವುದು.

(ii) ಸಿನೆಮಾ ಮಂದಿರಗಳು, ಈಜುಕೊಳಗಳು, ಮನೋರಂಜನಾ ಉದ್ಯಾನವನಗಳು, ಚಿತ್ರಮಂದಿರಗಳು, ಸಭಾಂಗಣಗಳು, ಅಸೆಂಬ್ಲಿ ಹಾಲ್ ಗಳು ಮತ್ತು ಅಂತಹುದೇ ಸ್ಥಳಗಳು. (iii) ಬಾರ್ ಗಳು, ಪಬ್ ಗಳು, ಕ್ಲ ಬ್ ಗಳು,ಹಾಗು ನೈಟ್ ಕ್ಲಬ್ ಗಳನ್ನು ತೆರೆಯತಕ್ಕದ್ದಲ್ಲ.

(iv) ಎಂಎಚ್ ಎ ಅನುಮತಿಸಿದ ಪ್ರಯಾಣಿಕರ ಅಂತರ-ರಾಷ್ಟ್ರೀಯ ವಿಮಾನ ಪ್ರಯಾಣ ಹೊರತುಪಡಿಸಿ

(v) ಸಾಮಾಜಿಕ/ರಾಜಕೀಯ/ಕ್ರೀಡೆ / ಮನೋರಂಜನೆ/ ಶೈಕ್ಷಣಿಕ/ ಸಾಂಸ್ಕೃತಿಕ/ ಧಾರ್ಮಿಕ ಕಾರ್ಯಗಳು ಮತ್ತು
ಇತರೆ ಬೃಹತ್ ಸಭೆಗಳು.(ನಾಟಕಗಳು, ಯಕ್ಷಗಾನಗಳನ್ನು ನಡೆಸುವಂತಿಲ್ಲ ಮತ್ತು ರಂಗಮಂದಿರಗಳನ್ನು ತೆರೆಯುವಂತಿಲ್ಲ)

(vi) ಯೋಗ ಕೇಂದ್ರಗಳನ್ನು ಮತ್ತು ಜಿಮ್ನಾಷಿಯಂಗಳನ್ನು ತೆರೆಯಲು ದಿನಾಂಕ 05-08-2020 ರಿಂದ ಅನುಮತಿಸಲಾಗುವುದು. (ಪ್ರತ್ಯೇಕ SOP ನೀಡಲಾಗುವುದು).

C) ಕೋವಿಡ್ -19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು :

1) ಸಾರ್ವಜನಿಕರು ಎಲ್ಲಾ ಸಾರ್ವಜನಿಕ ಸ್ದಳಗಳಲ್ಲಿ ಮುಖಗವಸನ್ನು ಕಡ್ಡಾಯವಾಗಿ ಧರಿಸುವುದು ಮತ್ತು ಎಲ್ಲಾ ವ್ಯಕ್ತಿಗಳು ಸಾಮಾಜಿಕ ಅಂತರವನ್ನು ಅನುಸರಿಸುವುದು.ಉಲ್ಲಂಘನೆಗಾಗಿ ನಿಗದಿತ ಅಧಿಕಾರಿಗಳು ನಿಗದಿಪಡಿಸಿದ ದಂಡವನ್ನು ವಿಧಿಸುವುದು/ಕಾನೂನು ಕ್ರಮ ವಹಿಸುವುದು.

2) ಸ್ದಳೀಯ ಪ್ರಾಧಿಕಾರಗಳು ಅದರ ಕಾನೂನುಗಳು, ನಿಯಮಗಳು ಅಥವಾ ನಿಬಂಧನೆಗಳಿಗೆ ಅನುಗುಣವಾಗಿ ಸಾರ್ವಜನಿಕ ಸ್ದಳಗಳಲ್ಲಿ ಉಗಿಯುವುದನ್ನು ನಿರ್ಬಂಧಿಸಿದೆ ಹಾಗೂ ಇದರ ಉಲ್ಲಂಘನೆಗಾಗಿ ನಿಗದಿಪಡಿಸಿದ ದಂಡವನ್ನು ವಿಧಿಸುವುದು.

3) ವಿವಾಹದ ಸಂಧರ್ಭಗಳಲ್ಲಿ ಸಾಮಾಜಿಕ ಅಂತರವನ್ನು ಖಾತರಿಪಡಿಸಿಕೊಂಡು, ಗರಿಷ್ಟ 50 ಜನರನ್ನುಮಾತ್ರ ಅಹ್ವಾನಿಸತಕ್ಕದ್ದು.ಈ ಬಗ್ಗೆ ಹೊರಡಿಸಲಾದ ಸರಕಾರದ ಎಲ್ಲಾ ನಿಯಮಾವಳಿಗಳನ್ನು ಪಾಲಿಸುವುದು.ಈ ಬಗ್ಗೆ ಕಡ್ಡಾಯವಾಗಿ ಸಂಬಂಧ ಪಟ್ಟ ತಹಶೀಲ್ದಾರರಿಂದ ಪೂರ್ವಾನುಮತಿ ಪಡೆಯುವುದು.

4) ಶವ ಸಂಸ್ಕಾರ / ಅಂತಿಮ ಯಾತ್ರೆಯ ಸಮಯದಲ್ಲಿ ಸಾಮಾಜಿಕ ಅಂತರವನ್ನು ಖಾತರಿಪಡಿಸಿಕೊಳ್ಳುವುದು ಮತ್ತು ಗರಿಷ್ಟ 20 ಜನರಿಗಿಂತ ಮೇಲೆ ಸೇರದೇ ಇರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

5) ಬೃಹತ್ ಸಾರ್ವಜನಿಕ ಸಭೆಗಳು /ಒಟ್ಟು ಗೂಡುವಿಕೆ ನಿಷೇಧವನ್ನು ಮುಂದುವರೆಸಲಾಗಿದೆ.

6) ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ , ಪಾನ್ , ಗುಟ್ಕಾ, ತಂಬಾಕು ಇತ್ಯಾದಿಗಳ ಬಳಕೆಯನ್ನು ನಿಷೇದಿಸಿದೆ.
7) 65 ವರ್ಷ ಜಾಸ್ತಿ ಪ್ರಾಯದ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಮತ್ತು ಗರ್ಭಿಣಿಯರು, ಅಸ್ವಸ್ಥರು , ತುರ್ತು ವೈದ್ಯಕೀಯ ಕಾರಣ ಹೊರತ್ತು ಪಡಿಸಿ ಮನೆಯಿಂದ ಹೊರಗೆ ಬರುವುದು ಸೂಕ್ತವಲ್ಲ.

D) ಕೆಲಸದ ಸ್ಥಳಗಳಲ್ಲಿ ಹೆಚ್ಚುವರಿ ನಿರ್ದೇಶನಗಳು :

  • ಮನೆಯಿಂದ ಕೆಲಸ (work from Home): ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದಲೇ ಕೆಲಸ ಮಾಡುವ ಪದ್ದತಿಯನ್ನು ಅನುಸರಿಸಬೇಕು.
  • ಕೆಲಸದಲ್ಲಿ ಪಾಳಿಯ ಪದ್ಧತಿ/ವ್ಯವಹಾರ ಸಮಯ: ಕಚೇರಿಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಅಂಗಡಿಗಳಲ್ಲಿ , ಮಾರುಕಟ್ಟೆಗಳಲ್ಲಿ ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ/ವ್ಯವಹಾರದ ಸಮಯದಲ್ಲಿ ಪಾಳಿಯ ಪದ್ಧತಿಯನ್ನು ಅನುಸರಿಸುವುದು.
  • ಸ್ಕ್ರೀನಿಂಗ್ ಮತ್ತು ನೈರ್ಮಲ್ಯ: ಎಲ್ಲಾ ಸಾಮಾನ್ಯ ಪ್ರದೇಶಗಳ್ಲಲಿ, ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ , ಕೈ ತೊಳೆಯುವುದಕ್ಕೆ ಮತ್ತು ಸ್ಯಾನಿಟೈಸರ್ ಗೆ ಅವಕಾಶ ಕಲ್ಪಿಸುವುದು.
  • ನಿಯಮಿತ ಸ್ಯಾನಿಟೈಸೇಷನ್: ಕೆಲಸದ ಸಂಪೂರ್ಣ ಆವರಣ, ಸಾಮಾನ್ಯ ಸೌಲಭ್ಯಗಳು ಮತ್ತು ಮಾನವ ಸಂಪರ್ಕಕ್ಕೆ ಬರುವ ಎಲ್ಲಾ ಅಂಶಗಳಿಗೆ ಆಗಾಗ್ಗೆ ನೈರ್ಮಲ್ಯೀಕರಣ ಮಾಡತಕ್ಕದ್ದು.
  • ಸಾಮಾಜಿಕ ಅಂತರ: ಕೆಲಸದ ಸ್ಥಳದಲ್ಲಿ ವ್ಯಕ್ತಿಗಳ ನಡುವೆ, ಪಾಳಿಗಳ ನಡುವೆ, ಊಟದ ವಿರಾಮ ಮೊದಲಾವುದಗಳಲ್ಲಿ ಎಲ್ಲಾ ವ್ಯಕ್ತಿಗಳು ಸಾಕಷ್ಟು ಅಂತರಗಳನ್ನು ಕಾಯ್ದುಕೊಳ್ಳುವುದು.

ಮೇಲಿನ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ ಪೋಲಿಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು Disaster Management Act 2005 , ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಮತ್ತು IPC ಸೆಕ್ಷನ್ 188 ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.


Spread the love