ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಎಸ್.ಎಸ್.ಎಲ್. ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್

Spread the love

ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಎಸ್.ಎಸ್.ಎಲ್. ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್

ಉಡುಪಿ: ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಉಡುಪಿ ಜಿಲ್ಲೆಯ ಮತ್ತೊಂದು ಎಸ್.ಎಸ್.ಎಲ್ ಸಿ ವಿದ್ಯಾರ್ಥಿನಿಗೆ ಕೋರೊನಾ ಪಾಸಿಟಿವ್ ದೃಢಗೊಂಡಿದೆ

ಈಗಾಗಲೇ ಮೂರು ಪರೀಕ್ಷೆಗಳನ್ನು ಬರೆದಿರುವ ಕುಂದಾಪುರದ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಮಹಾರಾಷ್ಟ್ರ ದಿಂದ ಆಗಮಿಸಿ ಕ್ವಾರಂಟೈನ್ ಮುಗಿಸಿ ಬಂದ ಕುಟುಂಬದ ಸಂಪರ್ಕದಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸೋಂಕಿತ ವಿದ್ಯಾರ್ಥಿ ನಿಗೆ ಉಳಿದ ಮೂರು ಪರೀಕ್ಷೆಗೆ ಅವಕಾಶ ಇಲ್ಲವಾಗಿದ್ದು, ಆಗಸ್ಟ್ ತಿಂಗಳ ಪೂರಕ ಪರೀಕ್ಷೆ ಬರೆಯುವಂತೆ ಸೂಚನೆ ನೀಡಲಾಗಿದೆ.

ವಿದ್ಯಾರ್ಥಿ ಪರೀಕ್ಷೆ ಬರೆದ ಪರೀಕ್ಷಾ ಕೇಂದ್ರ ವನ್ನು ಶಿಕ್ಷಣ ಇಲಾಖೆ ಸ್ಯಾನಿಟೈಸ್ ಮಾಡಿದ್ದು ಬುಧವಾರ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ

ಭಾನುವಾರ ಹೆಜಮಾಡಿಯ ಶಾಲೆಯೊಂದರಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಪಾಸಿಟಿವ್ ದೃಢಗೊಂಡಿತ್ತು. ಇದರೊಂದಿಗೆ ಉಡುಪಿಯಲ್ಲಿ ಈವರೆಗೆ ಇಬ್ವರು ಎಸ್.ಎಸ್. ಎಲ್.ಸಿ ವಿದ್ಯಾರ್ಥಿಗಳಿಗೆ ಸೋಂಕು ದೃಢಗೊಂಡಿದೆ.


Spread the love