ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ಕೊರೋನಾ ಹಾವಳಿ;  ಮಂಗಳವಾರ  11 ಮಂದಿಗೆ ಪಾಸಿಟಿವ್  

Spread the love

ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ಕೊರೋನಾ ಹಾವಳಿ;  ಮಂಗಳವಾರ  11 ಮಂದಿಗೆ ಪಾಸಿಟಿವ್  

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೊರೋನಾ ಹಾವಳಿ ಮುಂದುವರೆದಿದ್ದು, ಮಂಗಳವಾರ ಒಟ್ಟು 11 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1088ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ 5 ಮಂದಿ ಮಹಾರಾಷ್ಟ್ರ ದಿಂದ ಬಂದಿದ್ದು, ಇಬ್ಬರು ಕುವೈಟ್, ಮತ್ತು ತಲಾ ಒಬ್ಬರು ದುಬಾಯಿ ಮತ್ತು ಸೌದಿ ಆರೇಬಿಯಾದಿಂದ ಬಂದವರಾಗಿದ್ದಾರೆ. ಪೇಶಂಟ್ ಸಂಖ್ಯೆ 2047 ರ ಸಂಪರ್ಕದಿಂದ ಒರ್ವ ಮಹಿಳೆಗೆ ಪಾಸಿಟಿವ್ ಬಂದರೆ ರೋಗಿ ಸಂಖ್ಯೆ 9594 ರ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದೆ

ಈವರೆಗೆ ಒಟ್ಟು 978 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು,ಸದ್ಯ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ108 ಸೋಂಕಿತರಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಲ್ಲಾ ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ


Spread the love