ಉಡುಪಿ ಶಾಸಕರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಕೆ. ವಿಕಾಸ್ ಹೆಗ್ಡೆ

Spread the love

ಉಡುಪಿ ಶಾಸಕರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಕೆ. ವಿಕಾಸ್ ಹೆಗ್ಡೆ

ಕುಂದಾಪುರ: ಬಾಬರಿ ಮಸೀದಿ ದ್ವಂಸ ಮಾಡಿದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುಟುಂಬವನ್ನು ನಾಶ ಮಾಡುತ್ತೇವೆ ಎನ್ನುವ ಉಡುಪಿ ಬೆತ್ತಲೆ ಪ್ರಕರಣದ ಆರೋಪಿ, ಅದೆಷ್ಟೋ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿತನಾಗಿರುವ ಬುದ್ದಿವಂತರ, ಶಾಂತಿ ಪ್ರಿಯರ ನಾಡಾದ ಉಡುಪಿಯ ಶಾಸಕ ಯಶ್ಪಾಲ್ ಸುವರ್ಣರ ಹೇಳಿಕೆ ದ್ವೇಷ ಪೂರಿತ ಹಾಗೂ ಸಮಾಜದ ಶಾಂತಿ ಕದಡುವ ಹೇಳಿಕೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕ್ರಿಮಿನಲ್ ಹಿನ್ನೆಲೆಯ ಮೂಲಕವೇ ಸಾಮಾಜಿಕ ಜೀವನಕ್ಕೆ ಬಂದು, ಒಬ್ಬ ಜನಪ್ರತಿನಿದಿಯಾದ ಮೇಲೂ ಕಿಂಚಿತ್ತೂ ಬದಲಾವಣೆಯಾಗದೆ ಅದೇ ಕ್ರಿಮಿನಲ್ ಮನಸ್ಥಿತಿಯೊಂದಿಗೆ ಮುಂದುವರಿದಿರುವ ಉಡುಪಿ ಶಾಸಕರ ನಡೆ ನಾಗರಿಕ ಸಮಾಜ ಹಾಗೂ ಅವರನ್ನು ಆಯ್ಕೆ ಮಾಡಿದ ಮತದಾರರು ಸಹಿಸದೇ ಇರುವ ವರ್ತನೆ.

ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹಾಗೂ ದೇಶದ ಐಕ್ಯತೆ ಹಾಗೂ ಅಖಂಡತೆ ಉಳಿವಿಗೆ ಪ್ರಾಣವನ್ನೇ ಮೂಡಿಪಾಗಿಟ್ಟ ರಾಹುಲ್ ಗಾಂಧಿ ಕುಟುಂಬವನ್ನು ದ್ವಂಸ ಮಾಡುತ್ತೇವೆ ಎನ್ನುವ ಉಡುಪಿ ಶಾಸಕರ ಹೇಳಿಕೆ ಅವರ ರಾಜಕೀಯ ದಿವಾಳಿತನ ಹಾಗೂ ಅವರ ಕ್ರಿಮಿನಲ್ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಉಡುಪಿ ಶಾಸಕರು ಇಂತಹ ಅಸಂಬದ್ಧ ಹೇಳಿಕೆ ನೀಡುವ ಬದಲು ಯಾವುದಾದರೂ ಮಾನಸಿಕ ಸಮತೋಲನ ಸರಿ ಮಾಡುವ ಆಸ್ಪತ್ರೆಗೆ ಸೇರಿ ತಮ್ಮ ಕ್ರಿಮಿನಲ್ ಬುದ್ಧಿ ಹಾಗೂ ಅಸಮತೋಲಿತವಾಗಿರುವ ಮಾನಸಿಕ ಸ್ಥಿಮತೆಯನ್ನು ಸರಿ ಪಡಿಸಿಕೊಳ್ಳುವುದು ಉತ್ತಮವೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments