Spread the love
ಉದ್ಯಾವರ: ಹಿರಿಯ ಕೃಷಿಕ ರೋಬರ್ಟ್ ಫೆರ್ನಾಂಡಿಸ್ ನಿಧನ
ಉಡುಪಿ: ಉಡುಪಿ ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯ ರೋಯ್ಸ್ ಫೆರ್ನಾಂಡಿಸ್ ರವರ ತಂದೆ, ಹಿರಿಯ ಕೃಷಿಕರು, ಮಂಡಲ ಪಂಚಾಯತ್ ಸದಸ್ಯರು ಆಗಿದ್ದ ಉದ್ಯಾವರದ ಸಂಪಿಗೆ ನಗರ ನಿವಾಸಿ ರೋಬರ್ಟ್ ಫೆರ್ನಾಡಿಸ್ ಅಗಸ್ಟ್ 30ರಂದು ಅಲ್ಪ ಕಾಲದ ಅಸೌಖ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಅವರು ಇಬ್ಬರು ಪುತ್ರರಾದ ಹೆರಾಲ್ಡ್ ಮತ್ತು ರೋಯ್ಸ್, ಪುತ್ರಿಯರಾದ ಲವೀನಾ ಮತ್ತು ಜಿನೇವೀವ್ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಅವರ ಅಂತ್ಯಕ್ರಿಯೆ ವಿಧಿ ವಿಧಾನಗಳು ಮಂಗಳವಾರ ಸಪ್ಟೆಂಬರ್ 2 ರಂದು ನಡೆಯಲಿದೆ. ಬೆಳಿಗ್ಗೆ ಗಂಟೆ 11:30 ರಿಂದ ಅವರ ಸ್ವಗೃಹ ಸಂಪಿಗೆನಗರದಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶವಿದೆ. ಮಧ್ಯಾಹ್ನ 3 ಗಂಟೆಗೆ ಅಂತಿಮ ಪ್ರಾರ್ಥನಾ ವಿಧಿಗಳು ನೆರವೇರಿದ ಬಳಿಕ, 3.30ಕ್ಕೆ ಉದ್ಯಾವರ ಚರ್ಚಿನಲ್ಲಿ ಅಂತ್ಯಕ್ರಿಯೆಯ ವಿಧಿ ವಿಧಾನಗಳು ಜರಗಲಿದೆ.
Spread the love