ಎಚ್‍ಪಿಸಿಎಲ್ ಪೈಪ್‍ಲೈನ್ ಕಾರ್ಯಾರಂಭ
ಮ0ಗಳೂರು : ದಕ್ಷಿಣ ಕನ್ನಡದಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಶನ್ ವತಿಯಿಂದ ಮಂಗಳೂರು, ಮೈಸೂರು, ಹಾಸನ, ಬೆಂಗಳೂರುವರೆಗಿನ 95 ಕಿ.ಮೀ ಎಲ್.ಪಿ.ಜಿ ಗ್ಯಾಸ್ ಪೈಪ್ ಲೈನ್ ಕಾರ್ಯಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನತೆ ಹಾಗೂ ಪೈಪ್ ಅಳವಡಿಕೆ ಕಾರ್ಯವು ಪೂರ್ಣಗೊಂಡಿದೆ. ಅಕ್ಟೋಬರ್ 23ರಿಂದ ಪೈಪ್‍ಲೈನ್‍ನಲ್ಲಿ ಎಲ್.ಪಿ.ಜಿ. ಪಂಪಿಂಗ್ ಕಾರ್ಯವು ಆರಂಭಗೊಂಡಿರುತ್ತದೆ.
ಇದರಿಂದಾಗಿ ಎಲ್.ಪಿ.ಜಿ ಬುಲೆಟ್ ಟ್ಯಾಂಕರ್‍ಗಳ ಸಂಚಾರದಲ್ಲಿ ಗಣನೀಯ ಇಳಿಕೆಯನ್ನು ನಿರೀಕ್ಷಿಸಲಾಗಿದೆ. ಈ ಭೂಸ್ವಾಧೀನತೆ ಹಾಗೂ ಪೈಪ್ ಅಳವಡಿಕೆಗೆ ಸಹಕರಿಸಿದ ಎಲ್ಲಾ ರೈತರಿಗೆ / ಸಾರ್ವಜನಿಕರಿಗೆ ಜಿಲ್ಲಾಡಳಿತದ ವತಿಯಿಂದ ಅಭಿನಂದನೆಗಳು. ಪೈಪ್‍ಲೈನ್‍ನಲ್ಲಿ ಈಗಾಗಲೇ ಎಲ್.ಪಿ.ಜಿ ಪಂಪಿಂಗ್ ಕೆಲಸವು ಕಾರ್ಯಾರಂಭಗೊಂಡಿದ್ದು, ಕಾರ್ಯಕ್ರಮವು ಸುಗಮವಾಗಿ ನಡೆಯಲು ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.
            












