ಎಸೆಸೆಲ್ಸಿ ಫಲಿತಾಂಶ: ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಕೋಟದ ಅನಘ

Spread the love

ಎಸೆಸೆಲ್ಸಿ ಫಲಿತಾಂಶ: ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಕೋಟದ ಅನಘ

ಉಡುಪಿ: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನಘ ಅವರು 623 ಅಂಕಗಳನ್ನು ಪಡೆದು ರಾಜ್ಯಕ್ಕೆ 3 ನೇ ಸ್ಥಾನ ಪಡೆದಿರುತ್ತಾಳೆ.

ಈಕೆ ಲೋಕಾಯುಕ್ತ ಕಾನ್ ಸ್ಟೇಬಲ್ ನಾಗೇಶ್ ಉಡುಪ ಅವರ ಪುತ್ರಿಯಾಗಿದ್ದಾರೆ.

ರಾಜ್ಯಕ್ಕೆ 3 ನೇ ಸ್ಥಾನ ಪಡೆದ ಸಂತೋಷವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡ ಅನಘ ಓದಿನಲ್ಲಿದ್ದ ಶೃದ್ಧೆ, ಪರೀಕ್ಷೆಗೆ ನಡೆಸಿದ ಪೂರ್ವ ತಯಾರಿ, ಮಾರ್ಗದರ್ಶನ ನನ್ನ ಸಾಧನೆಗೆ ಕಾರಣ. ಅಂಕಗಳು ಕಡಿಮೆ ಬಂದರೆ ದೃತಿಗೇಡಬೇಕಾಗಿಲ್ಲ, ಮರಳಿ ಯತ್ನ ಮಾಡಬಹುದು. ಅಂಕಗಳು ಜೀವನ ನಿರ್ಧಾರ ಮಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.


Spread the love