ಎ.ಎಸ್.ಐ ಸಹಿತ ಮೂವರು ಸಿಬ್ಬಂದಿಗೆ ಕೊರೋನ ದೃಢ: ಬೈಂದೂರು ಪೊಲೀಸ್ ಠಾಣೆ ಎರಡನೇ ಬಾರಿ ಸೀಲ್‍ಡೌನ್

mangalorean.com
Spread the love

ಎ.ಎಸ್.ಐ ಸಹಿತ ಮೂವರು ಸಿಬ್ಬಂದಿಗೆ ಕೊರೋನ ದೃಢ: ಬೈಂದೂರು ಪೊಲೀಸ್ ಠಾಣೆ ಎರಡನೇ ಬಾರಿ ಸೀಲ್‍ಡೌನ್

ಬೈಂದೂರು: ಬೈಂದೂರು ಪೊಲೀಸ್ ಠಾಣೆಯ ಎ.ಎಸ್.ಐ ಸಹಿತ ಮೂವರು ಸಿಬಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯನ್ನು ಎರಡನೇ ಬಾರಿ ಕ್ಲೋಸ್ ಡೌನ್ ಮಾಡಲಾಗಿದೆ.

ಬೈಂದೂರು ಪೊಲೀಸ್ ಠಾಣೆಯ ಎ ಎಸ್ ಐ, ಮಹಿಳಾ ಪೊಲೀಸ್ ಹೋಮ್ ಗಾರ್ಡ್ ಸೇರಿ ಮೂವರಿಗೆ ಕೋರೊನಾ ಪಾಸಿಟಿವ್ ದೃಢಗೊಂಡಿದ್ದು ಮೂವರನ್ನು ಸಹ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ತಿಂಗಳು ಇದೇ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬಂದಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು ಎಸ್ಐ ಸಹಿತ ಹಲವರು ಕ್ವಾರಂಟೈನ್ ಗೆ ಒಳಗಾಗಿದ್ದರು. ಈಗ ಮತ್ತೆ ಪುನಃ ಐ ಸಹಿತ ಮೂವರು ಸಿಬಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯನ್ನು ಎರಡನೇ ಬಾರಿ ಕ್ಲೋಸ್ ಡೌನ್ ಮಾಡಲಾಗಿದ್ದು ಸ್ಯಾನಿಟೈಜ್ ಮಾಡಿದ ಬಳಿಕ ಮತ್ತೆ ಕಾರ್ಯಾರಂಭ ಮಾಡಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.


Spread the love