ಐಸ್ ಕ್ರೀಮ್ ವಾಹನದಲ್ಲಿ ದನ ಸಾಗಾಟ – ಪೋಲಿಸರಿಂದ ರಕ್ಷಣೆ

Spread the love

ಐಸ್ ಕ್ರೀಮ್ ವಾಹನದಲ್ಲಿ ದನ ಸಾಗಾಟ – ಪೋಲಿಸರಿಂದ ರಕ್ಷಣೆ

ವಿಟ್ಲ: ಅಮುಲ್ ಐಸ್‌ಕ್ರೀಂ ಹೆಸರಿನ ವಾಹನದಲ್ಲಿ ಕೇರಳದ ಕಸಾಯಿಖಾನೆಗೆ ಮೂರು ದನಗಳನ್ನು ಸಾಗಣೆ ಮಾಡುತ್ತಿದ್ದ ವೇಳೆ ಪತ್ತೆ ಹಚ್ಚಿದ ವಿಟ್ಲ ಪೊಲೀಸರ ತಂಡ ಮೂರು ದನಗಳು ಹಾಗೂ ವಾಹನವನ್ನು ವಿಟ್ಲ ಸಮೀಪದ ಸಾಲೆತ್ತೂರು ಕಟ್ಟತ್ತಿಲ ಬಳಿ ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಸಾಲೆತ್ತೂರು ರಸ್ತೆ ಮೂಲಕ ಕೇರಳದಲ್ಲಿರುವ ಕಸಾಯಿಖಾನೆಗೆ ಮೂರು ದನಗಳನ್ನು ಅಮುಲ್ ಐಸ್‌ಕ್ರೀಂನ ವಾಹನದಲ್ಲಿ ಕೊಂಡೊಯ್ಯಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಾಲೆತ್ತೂರು ಕಟ್ಟತ್ತಿಲ ಎಂಬಲ್ಲಿ ವಿಟ್ಲ ಸಬ್‌ ಇನ್‌ಸ್ಪೆಕ್ಟರ್‌ ಯಲ್ಲಪ್ಪ ಹಾಗೂ ಸಿಬ್ಬಂದಿ ತಂಡ ವಾಹನವನ್ನು ಅಡ್ಡಗಟ್ಟುತ್ತಿದ್ದರು. ಚಾಲಕ ವಾಹನವನ್ನು ಮುಂದಕ್ಕೆ ಚಲಾಯಿಸಿ, ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದು, ಬಳಿಕ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ವಾಹನವನ್ನು ಪರಿಶೀಲಿಸಿದಾಗ ಮೂರು ದನಗಳು ಪತ್ತೆಯಾಗಿವೆ.

ಕಳೆದ ಕೆಲವು ದಿನಗಳಿಂದ ಈ ವಾಹನದಲ್ಲಿ ದನಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಅದು ಐಸ್‌ಕ್ರೀಂ ವಾಹನ ಎಂದು ಪೊಲೀಸರು ಹಾಗೂ ಸಾರ್ವಜನಿಕರು ಗಂಭೀರವಾಗಿ ತೆಗೆದುಕೊಂಡಿಲ್ಲ. ಇದೀಗ ತಂಡದ ಕೃತ್ಯ ಬಯಲಿಗೆ ಬಂದಿದೆ. ವಿಚಾರಣೆ ವೇಳೆ ಕಳ್ಳತನ ನಡೆಸಿದ ದನಗಳು ಎಂಬುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 


Spread the love