ಕಂಕನಾಡಿಯಲ್ಲಿ ಮನೆಯಿಂದ ಹೊರಹೋದ ಯುವತಿ ನಾಪತ್ತೆ

Spread the love

ಕಂಕನಾಡಿಯಲ್ಲಿ ಮನೆಯಿಂದ ಹೊರಹೋದ ಯುವತಿ ನಾಪತ್ತೆ

ಮಂಗಳೂರು: ಮನೆಯಿಂದ ಹೊರಹೋದ ಯುವತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಶಾಲತಾ (22) ಎಂಬ ಯುವತಿ, ಅಕ್ಟೋಬರ್ 4 ರಂದು ತನ್ನ ಮನೆಯಾದ ಶಕ್ತಿನಗರ ಶ್ರೀ ದುರ್ಗಾ ನಿಲಯದಿಂದ ಹೋದವಳು ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿದ್ದಾಳೆ.

ಕಾಣೆಯಾದ ಯುವತಿಯ ಚಹರೆ ಇಂತಿವೆ: ಹೆಸರು – ಆಶಾಲತಾ, ಪ್ರಾಯ – 22 ವರ್ಷ, ಎತ್ತರ- 5.4 ಅಡಿ ಎತ್ತರ, ಕಪ್ಪು ಮೈಬಣ್ಣ, ಸಪೂರ ಶರೀರ, ಕೋಲು ಮುಖ, ಧರಿಸಿದ ಬಟ್ಟೆ – ಬಿಳಿ ಮತ್ತು ಗುಲಾಬಿ ಬಣ್ಣದ ಟಾಪ್, ಹಸಿರು ಬಣ್ಣದ ಪ್ಯಾಂಟ್. ಮಾತನಾಡುವ ಭಾಷೆ- ಕನ್ನಡ ತುಳು, ತಮಿಳು.

ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ದೊರಕಿದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆ, ದೂ.ಸಂ: 0824-2220529, 9480805354, ಮಂಗಳೂರು ನಗರ ಕಂಟ್ರೋಲ್ ರೂಮ್ 0824-2220800 ಸಂಪರ್ಕಿಸಲು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love