ಕಟಪಾಡಿ; ಪ್ರೇಮ ವೈಫಲ್ಯ ಯುವಕ ನೇಣಿಗೆ ಶರುಣು

Spread the love

ಕಟಪಾಡಿ; ಪ್ರೇಮ ವೈಫಲ್ಯ ಯುವಕ ನೇಣಿಗೆ ಶರುಣು

ಉಡುಪಿ: ಪ್ರೇಮ ವೈಫಲ್ಯದಿಂದ ಯುವಕನೋರ್ವ ನೇಣಿಗೆ ಶರಣಾದ ಘಟನೆ ಕಟಪಾಡಿ ಸಮೀಪ ಸೋಮವಾರ ನಡೆದಿದೆ.

ಮೃತ ಯುವಕನನ್ನು ಕಟಪಾಡಿ ನಿವಾಸ ಆಶಿತ್ (23) ಎಂದು ಗುರುತಿಸಲಾಗಿದೆ.

ಮೃತ ಆಶಿತ್ ಉತ್ತಮ ಡ್ಯಾನ್ಸರ್ ಆಗಿದ್ದು ಹಲವಾರು ಡ್ಯಾನ್ಸ್ ಶೋ ಗಳನ್ನು ಉಡುಪಿ ಮಣಿಪಾಲ ಪರಿಸರದಲ್ಲಿ ನೀಡಿದ್ದ. ಸದ್ಯ ಜೀವನೋಪಾಯಕ್ಕಾಗಿ ಪೈಟಿಂಗ್ ಕೆಲಸ ಮಾಡಿಕೊಂಡಿದ್ದು ಭಾನುವಾರ ರಾತ್ರಿ ಸುಮಾರಿಗೆ ಮನೆಯ ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ಜಗಳವಾದ ಕಾರಣ ಆತ್ಮಹತ್ಯೆಗೆ ಶಂಕೆ ಎಂದು ತಿಳಿದುಬಂದಿದೆ.

ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love