ಕರಾವಳಿ ಕಾವಲು ಪೊಲೀಸ್ ವತಿಯಿಂದ ಮಲ್ಪೆ ಲೈಟ್ ಹೌಸ್ ದ್ವೀಪದಲ್ಲಿ ಸ್ವಚ್ಚತಾ ಕಾರ್ಯಕ್ರಮ

Spread the love

ಕರಾವಳಿ ಕಾವಲು ಪೊಲೀಸ್ ವತಿಯಿಂದ ಮಲ್ಪೆ ಲೈಟ್ ಹೌಸ್ ದ್ವೀಪದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಉಡುಪಿ: ಗಾಂಧಿ ಜಯಂತಿ ಆಚರಣೆಯ ಅಂಗವಾಗಿ ಕರಾವಳಿ ಕಾವಲು ಪೊಲೀಸ್, ಮಲ್ಪೆ ಹಾಗೂ ಇತರ ಸಂಘಟನೆಗಳ ನೇತೃತ್ವದಲ್ಲಿ ಮಲ್ಪೆ ಲೈಟ್ ಹೌಸ್ ದ್ವೀಪದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.

ಗಾಂಧಿ ಜಯಂತಿ ಆಚರಣೆಯ ಅಂಗವಾಗಿ ಚೇತನ್ ಆರ್, ಐಪಿಎಸ್. ಪೊಲೀಸ್ ಅಧೀಕ್ಷಕರು, ಕರಾವಳಿ ಕಾವಲು ಪೊಲೀಸ್, ಮಲ್ಪೆರವರ ನೇತೃತ್ವದಲ್ಲಿ ಕರಾವಳಿ ಕಾವಲು ಪೊಲೀಸರು ಕಡಲ್ ಸೆಂಟರ್ ಫಾರ್ ಸಪ್ ಸರ್ಫ್ ಯೋಗ ಮತ್ತು ನೇಶನ್ ಫಸ್ಟ್ ತಂಡದವರ ಸಹಯೋಗದೊಂದಿಗೆ ಮಲ್ಪೆ ಲೈಟ್ ಹೌಸ್ ದ್ವೀಪದಲ್ಲಿ ಮತ್ತು ದ್ವೀಪದ ಸಮುದ್ರ ತೀರ ಪ್ರದೇಶದಲ್ಲಿ ಸ್ವಚ್ಛತೆ ಮಾಡಲಾಯಿತು ಹಾಗೂ ಸ್ವಚ್ಛತೆಯಿಂದ ಶೇಖರಿಸಿದ ಕಸವನ್ನು ಮಣಿಪಾಲ ಕಸ ವಿಲೇವಾರಿ ಘಟಕಕ್ಕೆ ಸಾಗಿಸಿ ವಿಲೇವಾರಿ ಮಾಡಲಾಯಿತು.

ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಾಗೂ ಸಹಕರಿಸಿದ ಎಲ್ಲರಿಗೂ ಚೇತನ್ ಆರ್, ಐಪಿಎಸ್. ಪೊಲೀಸ್ ಅಧೀಕ್ಷಕರು, ಕರಾವಳಿ ಕಾವಲು ಪೊಲೀಸ್, ಮಲ್ಪೆ ರವರು ಶ್ಲಾಘಿಸಿದರು.


Spread the love