ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ವತಿಯಿಂದ ಪಿಪಿಇ ಕಿಟ್ ವಿತರಣೆ

Spread the love

ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ವತಿಯಿಂದ ಪಿಪಿಇ ಕಿಟ್ ವಿತರಣೆ

ಉಡುಪಿ: ಕೋವಿಡ್-19 ಹಾವಳಿಗೆ ತತ್ತರಿಸಿರುವ ಜನತೆಗೆ ನೆರವಾಗುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ವತಿಯಿಂದ ಬುಧವಾರ ಹಸ್ತಾಂತರಿಸಲಾಯಿತು.

ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಡಿ ಎಚ್ ಒ ಡಾ|ಸುಧೀರ್ ಚಂದ್ರ ಸೂಡ ಅವರಿಗೆ ಸಂಘಟನೆಯ ವತಿಯಿಂದ 50 ಪಿಪಿಇ ಕಿಟ್ ಗಳನ್ನು ಹಸ್ತಾಂತರ ಮಾಡಲಾಯಿತು.

ಈ ವೇಳೆ ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಉಡುಪಿ ಜಿಲ್ಲೆ ಇದರ ಗೌರವಾಧ್ಯಕ್ಷರಾದ ಡಾ ಜೆರಿ ವಿನ್ಸೆಂಟ್ ಡಾಯಸ್, ಕಾರ್ಯದರ್ಶಿ ರೊಬರ್ಟ್ ಫುರ್ಟಾಡೊ, ಕೋಶಾಧಿಕಾರಿ ಆಲ್ವಿನ್ ಕ್ವಾಡ್ರಸ್, ಸಹಕಾರ್ಯದರ್ಶಿ ಜೊಯನ್ ಲೂವಿಸ್, ನಿರ್ದೇಶಕರಾದ ಟೆರೆನ್ಸ್ ಸುವಾರಿಸ್, ಲೂಯಿಸ್ ಲೋಬೊ ಉಪಸ್ಥಿತರಿದ್ದರು.


Spread the love