ಕರ್ನಾಟಕ ಸಂಘ ಕತಾರ್‌ನ 71ನೇ ಕರ್ನಾಟಕ ರಾಜ್ಯೋತ್ಸವ – “ಕರುನಾಡ ವೈಭವ-2026” ವೈಭವೋಪೇತ ಆಚರಣೆ

Spread the love

ಕರ್ನಾಟಕ ಸಂಘ ಕತಾರ್‌ನ 71ನೇ ಕರ್ನಾಟಕ ರಾಜ್ಯೋತ್ಸವ – “ಕರುನಾಡ ವೈಭವ-2026” ವೈಭವೋಪೇತ ಆಚರಣೆ

ದೋಹಾ, ಕತಾರ್: ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಸಂಯೋಜಿತ ಸಂಸ್ಥೆಯಾಗಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಸಂಘ ಕತಾರ್ (KSQ), ತನ್ನ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ “ಕರುನಾಡ ವೈಭವ-2026” ಸಾಂಸ್ಕೃತಿಕ ಮಹೋತ್ಸವವನ್ನು ಆಲ್ ವಕ್ರಾ ಸಮೀಪದ ಡಿಪಿಎಸ್-ಎಂಐಎಸ್ (DPS-MIS) ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಿತು.

ಕಾರ್ಯಕ್ರಮವು ಮುಖ್ಯ ಅತಿಥಿಗಳು ಮತ್ತು ಗಣ್ಯರಿಂದ ದೀಪ ಬೆಳಗಿಸುವುದರೊಂದಿಗೆ ಆರಂಭವಾಯಿತು. ಭಾರತ ಸರ್ಕಾರದ ಕತಾರ್ ರಾಯಭಾರಿ ಘನತೆವೆತ್ತ ಡಾ. ಕೆ. ಶ್ರೀಕರ್ ರೆಡ್ಡಿ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಶ್ರೀ ಅಶ್ವನಿ ಕುಮಾರ್ ಹಾಗೂ ಐಸಿಬಿಎಫ್ (ICBF) ಸಂಯೋಜಕ ಶ್ರೀ ಹರೀಶ್ ಪಾಂಡೆ ಉಪಸ್ಥಿತರಿದ್ದು, ಶ್ರೀ ಹರೀಶ್ ಪಾಂಡೆ ಅವರು ಕಾರ್ಯಕ್ರಮದ ಮಹತ್ವವನ್ನು ಕುರಿತು ಮಾತನಾಡಿದರು. ಕತಾರ್ ಸಂಸ್ಕೃತಿ ಸಚಿವಾಲಯದ ಮ್ಯೂಸಿಕ್ ಅಫೇರ್ಸ್ ಸೆಂಟರ್ ನಿರ್ದೇಶಕ ಶ್ರೀ ಖಾಲಿದ್ ಅಲ್ ಸಾಲೇಮ್, ಐಸಿಸಿ ಅಧ್ಯಕ್ಷ ಶ್ರೀ ಎ.ಪಿ. ಮಣಿಕಂಠನ್, ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್, ಹಾಗೂ ಮಾಜಿ ಶಾಸಕ ಶ್ರೀ ಮೊಯ್ದೀನ್ ಬಾವಾ ಗೌರವಾನ್ವಿತ ಅತಿಥಿಗಳಾಗಿ ಶೋಭಿಸಿದರು.

ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಸ್ವಾಗತ ಕೋರಿ ಅಧ್ಯಕ್ಷೀಯ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಸುಜಿತ್ ಕುಮಾರ್ ಹೊಸದುರ್ಗ ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಸ್ಥಳೀಯ ಪ್ರತಿಭೆಗಳ ಲೇಖನ, ಕವನ, ಚಿತ್ರಕಲೆ ಹಾಗೂ ಸಾಧನೆಗಳನ್ನು ಒಳಗೊಂಡ ‘ಕೆಎಸ್‌ಕ್ಯೂ’ನ ವಾರ್ಷಿಕ ಸ್ಮರಣ ಸಂಚಿಕೆ “ಶ್ರೀಗಂಧ” ಅನ್ನು ಮುಖ್ಯ ಸಂಪಾದಕರಾದ ಶ್ರೀ ಕಿಶೋರ್ ವಿ. ಹಾಗೂ ಅವರ ಸಂಪಾದಕೀಯ ಮಂಡಳಿಯ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು. ಹಿರಿಯ ಚಲನಚಿತ್ರ ನಟಿ, ಮಾಜಿ ಸಚಿವೆ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿ ಶ್ರೀಮತಿ ಉಮಾಶ್ರೀ ಅವರಿಗೆ ಪ್ರತಿಷ್ಠಿತ ‘ಕತಾರ್ ಕನ್ನಡ ಸಮ್ಮಾನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಪಾಧ್ಯಕ್ಷ ಶ್ರೀ ಅನಿಲ್ ಭಾಸಗಿ ವಂದನಾರ್ಪಣೆ ನೆರವೇರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಶ್ರೀ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಉಪನ್ಯಾಸ ನೀಡಿದರು. ‘ಕಾಮಿಡಿ ಕಿಲಾಡಿಗಳು’ ಕಲಾವಿದರಾದ ರಾಘವೇಂದ್ರ (ರಾಗಿಣಿ), ಜಗ್ಗಪ್ಪ ಹಾಗೂ ಸುಶ್ಮಿತಾ ಅವರ ಹಾಸ್ಯ ಪ್ರಹಸನಗಳು, ‘ಸ ರಿ ಗ ಮ ಪ’ ಗಾಯಕರಾದ ಮೆಹಬೂಬ್ ಸಾಬ್ ಮತ್ತು ರೇವಣಸಿದ್ಧ ಫುಲಾರಿ ಅವರ ಗಾಯನ, ನಿರೂಪಕಿ ಪ್ರಣೀತಾ ತಿಮ್ಮಪ್ಪ ಅವರ ನಿರೂಪಣೆ ಹಾಗೂ ಸ್ಥಳೀಯ ಮಕ್ಕಳು ಮತ್ತು ಕರ್ನಾಟಕದ ಸಹೋದರ ಸಂಸ್ಥೆಗಳ ಪ್ರತಿನಿಧಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.

ಕಾರ್ಯಕ್ರಮದಲ್ಲಿ ಐಸಿಸಿ ಸಲಹಾ ಮಂಡಳಿ ಅಧ್ಯಕ್ಷ ಶ್ರೀ ಪಿ.ಎನ್. ಬಾಬುರಾಜನ್, ಐಸಿಬಿಎಫ್ ಪ್ರಧಾನ ಕಾರ್ಯದರ್ಶಿ ಹಾಗೂ ಕೆಎಸ್‌ಕ್ಯೂ ಮಾಜಿ ಅಧ್ಯಕ್ಷ ಶ್ರೀ ದೀಪಕ್ ಶೆಟ್ಟಿ, ಐಸಿಸಿ ಕರ್ನಾಟಕ ಪ್ರತಿನಿಧಿ ಶ್ರೀ ಸಂದೀಪ್ ಶ್ರೀರಾಮರೆಡ್ಡಿ, ಕೆಎಸ್‌ಕ್ಯೂ ಸಲಹಾ ಮಂಡಳಿ ಅಧ್ಯಕ್ಷ ಡಾ. ಎಂ. ರವಿಶೆಟ್ಟಿ ಹಾಗೂ ಸಲಹಾ ಮಂಡಳಿ ಸದಸ್ಯರಾದ ಶ್ರೀ ಅರುಣ್ ಕುಮಾರ್, ಶ್ರೀ ವಿ.ಎಸ್. ಮನ್ನಂಗಿ, ಶ್ರೀ ಹೆಚ್.ಕೆ. ಮಧು, ಡಾ. ಸಂಜಯ್ ಕುದರಿ ಮತ್ತು ಶ್ರೀ ಮಹೇಶ್ ಗೌಡ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ಕೆಎಸ್‌ಕ್ಯೂ ಕಾರ್ಯಕಾರಿ ಸಮಿತಿ ಮತ್ತು ಸ್ವಯಂಸೇವಕರ ಶ್ರಮವಿದೆ: ಸುಬ್ರಹ್ಮಣ್ಯ ಹೆಬ್ಬಾಗಿಲು (ಅಧ್ಯಕ್ಷರು), ಅನಿಲ್ ಭಾಸಗಿ (ಉಪಾಧ್ಯಕ್ಷರು), ಸುಜಿತ್ ಕುಮಾರ್ ಹೊಸದುರ್ಗ (ಪ್ರಧಾನ ಕಾರ್ಯದರ್ಶಿ), ಮಂಜೋತ್ ಸುರೇಶ್ (ಖಜಾಂಚಿ), ಭಾವನಾ ನವೀನ್ (ಸಾಂಸ್ಕೃತಿಕ ಕಾರ್ಯದರ್ಶಿ), ಶಶಿಧರ್ ಹೆಚ್.ಬಿ. (ಜಂಟಿ ಸಾಂಸ್ಕೃತಿಕ ಮತ್ತು ಕನ್ನಡ ಚಟುವಟಿಕೆಗಳ ಕಾರ್ಯದರ್ಶಿ), ಎಲ್.ಜಿ. ಪಾಟೀಲ್ (ಕ್ರೀಡಾ ಕಾರ್ಯದರ್ಶಿ), ಪ್ರಶಾಂತ್ ಹಿರೇಮಠ್ (ಮಾಧ್ಯಮ, ಪಿಆರ್ ಮತ್ತು ಬೆನೆವೊಲೆಂಟ್ ಕಾರ್ಯದರ್ಶಿ), ಪ್ರಭುರಾಜು ಜಗಳೂರು (ಕಾರ್ಯಕ್ರಮ ಮತ್ತು ಲಾಜಿಸ್ಟಿಕ್ಸ್ ಕಾರ್ಯದರ್ಶಿ), ಶುಭ ಆರ್. ರಾವ್ (ಮಹಿಳಾ ಮತ್ತು ಮಕ್ಕಳ ಚಟುವಟಿಕೆಗಳ ಕಾರ್ಯದರ್ಶಿ), ದಾಕ್ಷಾಯಣಿ ಜಿ. (ಜಂಟಿ ಕ್ರೀಡಾ ಕಾರ್ಯದರ್ಶಿ), ಹಾಗೂ ಗುರುಪ್ರಸಾದ್ ಬಿ.ಕೆ. (ಪರಿಸರ ಮತ್ತು ಸದಸ್ಯತ್ವ ಕಾರ್ಯದರ್ಶಿ).


Spread the love
Subscribe
Notify of

0 Comments