ಗಲ್ಫ್ ರಾಷ್ಟ್ರದ ಅಪ್ರತಿಮ ಕಲಾಪ್ರತಿಭೆ ಪ್ರೇರಣಾ ಪೈ ಭರತನಾಟ್ಯ ರಂಗ ಪ್ರವೇಶ
ಅರಬ್ ಸಂಯುಕ್ತ ಸಂಸ್ಥಾನದ ಶಾರ್ಜಾ ಡೆಲ್ಲಿ ಪ್ರವೈಟ್ ಸ್ಕೂಲ್ ಗ್ರೇಡ್ 9 ವಿದ್ಯಾರ್ಥಿನಿ ಕು| ಪ್ರೇರಣಾ ಪೈ ಭರತ ನಾಟ್ಯದಲ್ಲಿ ಕಲಾನಿಪುಣತೆಯನ್ನು ಪಡೆದು ಭರತನಾಟ್ಯದಲ್ಲಿ ರಂಗಪ್ರವೇಶಕ್ಕೆ ಜುಲೈ 23 ಕ್ಕೆ ಮಂಗಳೂರು ಡಾನ್ ಬಾಸ್ಕೊ ಸಭಾಂಗಣ ಸಾಕ್ಷಿಯಾಗಲಿದೆ.
ಮಂಗಳೂರಿನ ಶ್ರೀಮತಿ ಶಾರದ ಮತ್ತು ಶ್ರೀ ಸಂಜೀವ ಪೈ ಹಾಗೂ ಶ್ರೀಮತಿ ಜಾಹ್ನವಿ ಮತ್ತು ಶ್ರೀ ಪುರುಷೋತ್ತಮ ಶೆಣೈ ಇವರ ಮೊಮ್ಮಗಳು ಶಾರ್ಜಾದಲ್ಲಿ ನೆಲೆಸಿರುವ ಶ್ರೀಮತಿ ರಾಗಿಣಿ ಮತ್ತು ಶ್ರೀ ಹರೀಶ್ ಪೈ ದಂಪತಿಗಳ ಮಗಳು ತನ್ನ ಐದನೆಯ ವಯಸ್ಸಿನಿಂದಲೇ ನೃತ್ಯ ಅಭ್ಯಾಸದಿಂದ ಪರಿಪಕ್ವ ಹೆಜ್ಜೆಗಳನಿಟ್ಟು ಇದೀಗ ಪರಿಪೂರ್ಣತೆಯನ್ನು ಪಡೆದಿದ್ದಾಳೆ.

ಭಾರತೀಯ ಭವ್ಯ ಪರಂಪರೆಯ ಶಾಸ್ತ್ರೀಯ ಕಲೆ ಭರತನಾಟ್ಯ ರಂಗ ಪ್ರವೇಶ ಸಮಾರಂಭಕ್ಕೆ ಬೆಂಗಳೂರಿನ ನಟರಾಜ ನೃತ್ಯ ಶಾಲೆಯ ಸ್ಥಾಪಕ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ಗುರು ಶ್ರೀಮತಿ ಜಿ. ಎಸ್. ರಾಜಲಕ್ಷ್ಮೀ, ಸುರತ್ಕಲ್ ಶ್ರೀ ನಾಟ್ಯಂಜಲಿ ಕಲಾ ಅಕಾಡೆಮಿ ಸ್ಥಾಪಕ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿಧ್ವಾನ್ ಶ್ರೆ ಚಂದ್ರಶೇಖರ ನಾವಡ ಹಾಗೂ ಪ್ರಖ್ಯಾತ ಸಂಗೀತ ನೃತ್ಯ ವಿಮರ್ಶಕರು ವಿದ್ವಾಂಸರಾದ ಕರ್ನಾಟಕ ಕಲಾಶ್ರೀ ಡಾ| ಎಂ. ಸೂರ್ಯ ಪ್ರಸಾದ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
“ಕ್ಲಾಸಿಕಲ್ ರಿದಂಸ್” ತಪೋಭೂಮಿಯಲ್ಲಿ ಅರಳಿದ ಕಲಾ ಪ್ರತಿಭೆ ಕು| ಪ್ರೇರಣಾ ಪೈ
ಕು| ಪ್ರೇರಣಾ ಪೈ ತನ್ನ ಐದನೆಯ ವರ್ಷ 2007 ರಲ್ಲಿ ಶಾರ್ಜಾ ಕೈರಳಿ ಕಲಾ ಕೇಂದ್ರಂ ನಲ್ಲಿ ಗುರು ಮುರಳಿ ಯವರಿಂದ ಪ್ರಾರಂಭದ ಪ್ರಥಮ ಹಂತದ ತರಭೇತಿಯನ್ನು ಪಡೆದು ನಂತರ 2013 ರಿಂದ ಶಾರ್ಜಾದ ಪ್ರಖ್ಯಾತ ಕಲಾ ಸಂಸ್ಥೆ “ಕ್ಲಾಸಿಕಲ್ ರಿದಂಸ್” ಸ್ಥಾಪಕ ನಿರ್ದೇಶಕರಾದ ಗುರು ವಿಧೂಷಿ ರೋಹಿಣಿ ಅನಂತ್ ರವರ್ ಶಿಷ್ಯೆಯಾಗಿ ಭರತ ನಾಟ್ಯದಲ್ಲಿ ಐದು ಹಂತಗಳಲ್ಲಿ ಪರೀ ಕ್ಷೆ ಮುಗಿಸಿ ಸೀನಿಯರ್ ಡಿಪ್ಲೋಮಾ ಭಾರತದ ಪ್ರಖ್ಯಾತ ಪುರಾತನ ಕಲಾ ಕೇಂದ್ರ ಚಂಡಿಗಡದಲ್ಲಿ ಜೇಷ್ಟತಾ ಶ್ರೇಣಿಯಲ್ಲಿ ಪಡೆದು ಜೊತೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕರ್ನಾಟಕ ಕಲಾಶ್ರೀ ವಿಧೂಷಿ ರಂಗನಾಯಕಿ ರಾಜನ್ ಅವರಿಂದ ಕಲಿಯುತಿದ್ದಾಳೆ.
ಅರಬ್ ಸಂಯುಕ್ತ ಸಂಸ್ಥಾನದ ಹಲವು ಪ್ರತಿಷ್ಠಿತ ಸಮಾರಂಭಗಳ ವೇದಿಕೆ ಹಾಗೂ ಭಾರತದಲ್ಲಿ ಹಲವಾರು ನೃತ್ಯ ಪ್ರದರ್ಶನ ನೀಡಿ ಜನ ಮೆಚ್ಚುಗೆಯನ್ನು ಪಡೆದಿರುವ ಪ್ರೇರಣಾ ಪೈ ಅಪ್ಪಟ ಬಾಲ ಪ್ರತಿಭೆ ತನ್ನ ಕಲಾ ತಪಸ್ಸಿನಿಂದ ಕಲಾ ಪ್ರೌಢಿಮೆಯನ್ನು ಪಡೆಯ ಹಂತಕ್ಕೆ ತಲುಪಿರುವುದು ತನ್ನ ಸಹಪಾಠಿಗಳು, ಬಂಧು ಮಿತ್ರರು, ಅನಿವಾಸಿ ಕನ್ನಡಿಗರು ಹೆಮ್ಮೆ ಪಡುವಂತಾಗಿದೆ.
ಯು.ಎ.ಇ. ಯ ಪ್ರತಿಷ್ಠಿತ ಶೇಖ್ ಹಂದಾನ್ ಪ್ರಶಸ್ತಿ ಪ್ರೇರಣಾ ಮಡಿಲಿಗೆ.


ಪಾಠದೊಂದಿಗೆ ಪಠ್ಯೆತರ ಚಟುವಟಿಕೆ, ಸಾಮಾಜಿಕ ಚಟುವಟಿಕೆ, ಸಂಶೋಧನಾತ್ಮಕ, ಪ್ರಯೋಗತ್ಮಕ, ಪ್ರಬಂಧ, ಹಸ್ತಕೌಶಲ್ಯದಲ್ಲಿ ಸದಾ ಹಸನ್ಮುಖಿಯಾಗಿರುವ ಕು| ಪ್ರೇರಣಾ ಪೈ ಯು.ಎ.ಇ. ಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಪ್ರಶಸ್ತಿ “ಶೇಖ್ ಹಂದಾನ್ ಪ್ರಶಸ್ತಿ” 2013 ಮತ್ತು 2015 ರಲ್ಲಿ ಎರಡು ಬಾರಿ ಪಡೆದು, 2015 ರಲ್ಲಿ ಶಾರ್ಜಾ ಅವಾರ್ಡ್ ಫಾರ್ ಅಕಾಡೆಮಿಕ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಪಡೆದು ತನ್ನ ಶಾಲೆಯ, ಜನ್ಮದಾತರ, ಅನಿವಾಸಿ ಕನ್ನಡಿಗರ ಗೌರವವನ್ನು ಹೆಚ್ಚಿಸಿದ್ದಾಳೆ.
ಯು.ಎ.ಇ. ಯ ವಿವಿಧ ಸಂಘ ಸಂಸ್ತೆಗಳಿಂದ ಪ್ರೇರಣಾ ಗೆ ಸನ್ಮಾನ ಗೌರವ
ಯು.ಎ.ಇ. ಯಲ್ಲಿರುವ ಕನ್ನಡಪರ ಸಂಘಟನೆ ಅಬುಧಾಬಿ ಕರ್ನಾಟಕ ಸಂಘ, ಸಂಘ ಶಾರ್ಜಾ ದ ಕರ್ನಾಟಕ ರಾಜ್ಯೋತ್ಸವ ಸಮಾರಂಭ, ಅಮ್ಚಿಗೆಲೆ ಸಮಾಜ ಯು.ಎ.ಇ. ವಾರ್ಷಿಕೋತ್ಸವದ ಸಮಾರಂಭದಲ್ಲಿ ಸಾಧನೆ ಮಾಡಿರುವ ಬಾಲ ಪ್ರತಿಭೆಯನ್ನು ಸನ್ಮಾನಿಸಿ ಗೌರವಿಸಲಾಗಿದೆ.
ಪಠ್ಯ ಹಾಗು ಪಠ್ಯೆತರ ಚಟುವಟಿಕೆಗಳ ಸಾಧನೆಯ ಹಾದಿಯಲ್ಲಿ…
* ಯು.ಎನ್. ಎಸ್. ಡಬ್ಲ್ಯು – ಗ್ಲೋಬಲ್ ಆಸ್ಟ್ರೇಲಿಯಾ ಅಯೊಜಿಸಿದ ಇಂಟರ್ ನ್ಯಾಷನಲ್ ಅಸ್ಸೆಸ್ಮೆಂಟ್ ಫಾರ್ ಸ್ಕೂಲ್ಸ್ ಸ್ಪರ್ಧೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ.
* ಸ್ಪೇಸ್ ಫ್ಲೈಟ್ ಕ್ಯೂಬ್ಸ್ ಇನ್ ಸ್ಪೇಸ್ – ಯು.ಎಸ್. ಎ. 2014 ಮತ್ತು 2015 ರಲ್ಲಿ ಎರಡು ಯಶಸ್ವಿ ಪ್ರಯೋಗಕ್ಕೆ ಆಯ್ಕೆ.
* ಸೋಲಾರ್ ಸ್ಟ್ರೊಮ್ ಚಾಲೆಂಜ್, ನಾಸಾ 2013 ಮತ್ತು ಇಂಟರ್ ನ್ಯಾಶನಲ್ ಸ್ಪೇಸ್ ಸ್ಟೇಷನ್ ಅರ್ಥ್, ಕೆ. ಎಮ್. ಎಮ್. ಮಿಶನ್ ಜುಲೈ 2014 ಹಾಗೂ ಕಾಸಿನಿ ಸೈಂಟಿಸ್ಟ್ ಫರ್ ಎ ಡೇ 2014 ರಲ್ಲಿ ಭಾಗವಹಿಸುವ ಅವಕಾಶ ದೊರೆತಿದೆ.
ಕ್ರಿಯಾತ್ಮಕ ಬರಹಗಳು
* ನ್ಯೂ ವಾಯಿಸಸ್ ಯಂಗ್ ರೈಟರ್ಸ್ – ಅಂತರಾಷ್ಟ್ರೀಯ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮಸ್ಥಾನ.
* ಲೌರಾ ಥೋಮಸ್ ಕಮ್ಯೂನಿಕೇಶನ್ ಕೆನಡಾ – ಕಥಾ ಲೇಖನ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು.
* 2015 ರಲ್ಲಿ ಪ್ರಬಂಧ ಲೇಖನ ’ಲಿವಿಂಗ್ ರೈನ್ ಫಾರೆಸ್ಟ್’ ಯು.ಕೆ. ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು.
* ಜಪಾನ್ ಮತ್ತು ಯೂನೆಸ್ಕೊ – ’ಗೋಯಿ ಪೀಸ್’ ಪ್ರಬಂಧ ಲೇಖನಕ್ಕೆ ಗೌರವ.
* ಕೆನಡಿಯನ್ ಯೂನಿವರ್ಸಿಟಿ ದುಬೈ ಆಶ್ರಯದಲ್ಲಿ ನಡೆದ ’ನ್ಯಾಶನಲ್ 100 ವರ್ಡ್ಸ್ ಸ್ಪರ್ಧೆಯಲ್ಲಿ ತೃತಿಯಾ ಸ್ಥಾನ.
ವಿಡಿಯೋ ಮತ್ತು ಅನಿಮೇಶನ್
* ’ವೆಜಿಟೇರಿಯಸಮ್ ಪ್ರೊಮೋಷನ್ 2014’ ವಿಡಿಯೋ ತಯಾರಿ , 250 ಡಾಲರ್ ವೆಜಿಟೇರಿಯನ್ ಸ್ಕಾಲರ್ಶಿಪ್
* ಸಿಲ್ವರ್ ಮೆಡಲ್ – ವರ್ಲ್ಡ್ ವೈಡ್ ಕ್ರಿಸ್ಟಲ್ ಗೊವಿಂಗ್ – ಯು. ಕೆ. ಸ್ಪರ್ಧೆ 2015
* ಚಿನ್ನದ ಪದಕ ಇಂಟರ್ನ್ಯಾಶನಲ್ ಓಶಿಯನ್ ಅವರ್ನೆಸ್ ಸ್ಟೂಡೆಂಟ್ ಕಾಂಟೆಸ್ಟ್, ಫಿಲ್ಮ್ ವಿಭಾಗದಲ್ಲಿ
2ನೇ ಬಹುಮಾನ ಮತ್ತು 250 ಡಾಲರ್ ನಿಧಿ ನೀಡಿಕೆ.
* ಪಾಪ್ಯೂಲೇಷನ್ ಎಜುಕೇಶನ್ – ವಾಷಿಂಗ್ಟನ್ ಡಿ.ಸಿ. ಇಂಟರ್ನ್ಯಾಶನಲ್ ವಿಡಿಯೋ ಕಾಂಟೆಸ್ಟ್ – ಗೌರವ
* ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ – ಯು.ಕೆ. ’ಬ್ರಿಲ್ ಬ್ರಾಯ್ಸನ್ ಪ್ರೈಜ್’ ಇಂಟರ್ನ್ಯಾಷನಲ್ ಸೈನ್ಸ್ ಕಾಂಟೆಸ್ಟ್ ಟಾಪ್ 25 ರಲ್ಲಿ ಆಯ್ಕೆ.
* ’ಗ್ರೀನ್ ಗೋ’ 2014 ಮಿಡ್ಲ್ ಈಸ್ಟ್ – ಮಿಡ್ಲ್ ಸ್ಕೂಲ್ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಯೂರೋಪಿಯನ್ ಎನ್ವರ್ನ್ಮೆಂಟ್ ಕಿರು ಚಲನ ಚಿತ್ರ ತಯಾರಿಗೆ ಆಯ್ಕೆ.
* ’ಎನ್ವರ್ನ್ಮೆಂಟ್ ಕ್ಯಾಂಪೆನ್’ ಪರಿಸರ ಕಾಳಜಿ ಅಭಿಯಾನದಲ್ಲಿ ಪಾಲ್ಗೋಳ್ಳುವ ಅವಕಾಶ.
* ’ಕ್ಲೀನ್ ಅಪ್ ದಿ ವರ್ಲ್ಡ್’ ಎಮಿರೇಟ್ಸ್ ಎನ್ವೈರ್ನಮೆಂಟ್ ಗ್ರೂಪ್ ಅಭಿಯಾನದಲ್ಲಿ ಸತತವಾಗಿ ಭಾಗವಹಿಸಿದ್ದು.
* ಇಂಟರ್ನ್ಯಾಶನಲ್ ಡಯನಾ ಅವಾರ್ಡ್ ಫಾರ್ ಕಮ್ಯೂನಿಟಿ – 2015 – ಪರಿಸರ ಕಾಳಜಿಗಾಗಿ.
* ಪ್ರಥಮ ಬಹುಮಾನ – ಶಾರ್ಜಾ ಎನ್ವೈರ್ನಮೆಂಟ್ ಅವೆರ್ನೆಸ್ – ಸೈನ್ಸ್ ಇನೊವೆಶನ್ ಟೀಮ್ – 2016
ದ್ವಿತೀಯ ಬಹುಮಾನ – ಶಾರ್ಜಾ ಎನ್ವೈರ್ನಮೆಂಟ್ ಅವೆರ್ನೆಸ್ – ಸೈನ್ಸ್ ಇನೊವೆಶನ್ ಟೀಮ್ – 2015
* ಎನ್ ಡಿ ಟಿ ವಿ – ಲೈಟ್ ಎ ಬಿಲ್ಲಿಯನ್ ಲೈವ್ಸ್ ಕೆಂಪೈನ್- ಮುಂಬೈ ಭಾಗವಹಿಸುವಿಕೆ
* ಅನುಪಯುಕ್ತ ವಸ್ತುವಿನಿಂದ ಉಪಯುಕ್ತ ವಸ್ತುಗಳ ತಯಾರಿ ಬಗ್ಗೆ ಪ್ರಾತ್ಯಕ್ಷಿಕೆ ಪ್ರ್ಕ್ಶದರ್ಶನ
* ಪರಿಸರ ರಕ್ಷಣೆಯ ಬಗ್ಗೆ ಪೇಸ್ ಬುಕ್, ಬ್ಲಾಗ್ ಗಳಲ್ಲಿ ಜಾಗೃತಿ ಮೂಡಿಸುವ ಲೇಖನ ಪ್ರಕಟ.
* ‘ಸೇವ್ ಟೈಗರ್’ ಅಂತರಾಷ್ಟ್ರೀಯ ಮಟ್ಟದಲ್ಲಿ ಪೋಸ್ಟರ್ ತಯಾರಿಕೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆ.
* ‘ಫುಡ್ ವೇಸ್ಟೆಜ್’ ಬಗ್ಗೆ ಜಾಗೃತಿ ಮೂಡಿಸುವ ಚಿತ್ರ ರಚನೆ – ಎಮಿರೇಟ್ಸ್ ಎನ್ವೈರ್ನಮೆಂಟ್ ಗ್ರೂಪ್ ಅಭಿಯಾನದಲ್ಲಿ,
* ಶಾಲೆಯಲ್ಲಿ 25 ಕಿಂತಲೂ ಹೆಚ್ಚು ಸಸಿ ನೆಟ್ಟು ಪೋಷಣೆ ಮಾಡಿರುವುದು
* ಪರಿಸರದಲ್ಲಿ ಶುಚಿತ್ವ ಕಾಪಾಡುವ ಅಭಿಯಾನದಲ್ಲಿ ಭಾಗವಹಿಸಿದ್ದು.
ಪ್ರೇರಣಾ ಪೈ ಕಲಾ ಗುರು ಕೊಲ್ಲಿನಾಡಿನ ಸಾಂಸ್ಕೃತಿಕ ಕಲಾ ರಾಯಬಾರಿ ವಿದೂಷಿ ಶ್ರೀಮತಿ ರೋಹಿಣಿ ಅನಂತ್
ರೋಹಿಣಿ ಅನಂತ್ ದುಬಾಯಿಯ ಪರಿಸರದಲ್ಲಿ ಆಸಕ್ತ ಮಕ್ಕಳನ್ನು ಒಟ್ಟುಮಾಡಿ “ಕ್ಲಾಸಿಕಲ್ ರಿದಂಸ್” ತಂಡವನ್ನು ರಚಿಸಿ ಹಲವಾರು ಪ್ರತಿಭೆಗಳಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಟ್ಟರು. ಇದೇ ಅವಧಿಯಲ್ಲಿ ತಮ್ಮ ಕಲಾಪ್ರತಿಭೆಗೆ ಗುರುಗಳಾದ ಶ್ರೀಮತಿ ರಾಜಲಕ್ಷ್ಮಿ, “ಪಂಡನಲ್ಲೂರು ಶೈಲಿ” ಪ್ರಸಿದ್ದಿ, ಗುರು ಶ್ರೀಮತಿ ರೇವತಿ ನರಸಿಂಹನ್, ಗುರು ಶ್ರೀಮತಿ ಲಲಿತಾ ಶ್ರೀನಿವಾಸನ್ – ಮೈಸೂರು ಶೈಲಿ, ಗುರು ಶ್ರೀಮತಿ ಪದ್ಮಿನಿ ರವಿ ವಳುವೂರ್ ಶೈಲಿಗಳ ಮೆರಗು ಸೇರಿಸಿ ತನ್ನಲ್ಲಿರುವ ನೃತ್ಯ ಕಲೆಗೆ ಹೆಚ್ಚಿನ ಮಹತ್ವದೊಂದಿಗೆ ಹಲವಾರು ನೃತ್ಯ ಪ್ರಾಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ರೋಹಿಣಿ ಅನಂತ್ ರವರ ಕನಸಿನ ಕಲ್ಪನೆಯ ನೃತ್ಯ ಶಾಲೆ “ಸ್ವರಾಲಯ ಸ್ಕೂಲ್ ಆಫ್ ಫರ್ಪಾಮಿಂಗ್ ಆರ್ಟ್ಸ್” 1996 ರಲ್ಲಿ ಪ್ರಾರಂಭಗೊಂಡು ನೂರಾ ಐವತ್ತಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ನೃತ್ಯ ತರಭೇತಿ ನೀಡಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು “ವಿಧ್ವತ್” ಪರೀಕ್ಷೆಯನ್ನು ಮುಗಿಸಿದ್ದಾರೆ. ಭಾರತಾದ್ಯಂತ ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿದ ಕೀರ್ತಿ ಇವರದ್ದು.
ರೋಹಿನಿ ಅನಂತ್ ರವರು ನೃತ್ಯ ಪರಿವೀಕ್ಷಕರಾಗಿ ಕರ್ನಾಟಕ ಪರೀಕ್ಷಾ ಮಂಡಳಿ, ಬೆಂಗಳೂರು ನಡೆಸುವ ನೃತ್ಯ ಪರೀಕ್ಷೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವಾರು ನೃತ್ಯ ಕಾರ್ಯಗಾರಗಳಲ್ಲಿ ನೃತ್ಯದ ಬಗ್ಗೆ ಮಾಹಿತಿ, ತರಭೇತಿ, ವ್ಯಾಯಾಮ, ನಟುವಾಂಗದ ಮೂಲಕ ನೃತ್ಯ ರಂಗಕ್ಕೆ ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ.
ರೋಹಿಣಿ ಅನಂತ್ ರವರ ಕಲಾ ಸಾಧನೆಗೆ ಕೇರಳಾ ರಾಜ್ಯ ಪ್ರಶಸ್ತಿ ಹಾಗೂ ಕೊಲ್ಲಿನಾಡಿನಲ್ಲಿ ಸಲ್ಲಿಸಿ ಸಾಂಸ್ಕೃತಿಕ ಸಾಧನೆಗೆ ದುಬಾಯಿಯಲ್ಲಿ “ಎಕ್ಸ್ಲೆನ್ಸ್ ಅವಾರ್ಡ್ ಫಾರ್ ಡ್ಯಾನ್ಸ್” ಪ್ರಶಸ್ತಿಯನ್ನು 2013 ರಲ್ಲಿ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ವಿದೇಶದಲ್ಲಿ ಭಾರತೀಯ ಕಲೆಯ ಅನಾವರಣದ ಸಾಧನೆಗೆ ’ಚಾಣಕ್ಯ ಪ್ರಶಸ್ತಿ’, ಕಥಕ್ ಮಹೋತ್ಸವದಲ್ಲಿ ’ನೃತ್ಯ ರತ್ನ” ಪ್ರಶಸ್ತಿಯನ್ನು ಪಡೆದು ಭಾರತೀಯ ಕಲೆಸಂಸ್ಕೃತಿಯ ಗೌರವವನ್ನು ಎತ್ತಿ ಹಿಡಿದ್ದಾರೆ.
ಗುರು ವಿಧೂಷಿ ರೋಹಿಣಿ ಅನಂತ್ ರವರ ಶಿಷ್ಯೆ ಪ್ರೇರಣಾ ಪೈ ತನ್ನ ಅವಿರತ ಅಭ್ಯಾಸದ ಮೂಲಕ ಪರಿಣಿತಿಯನ್ನು ಪಡೆದು ಕಲಾದೇವಿಯ ಅನುಗ್ರಹ ಪಡೆದು ಭರತನಾಟ್ಯ ರಂಗಪ್ರವೇಶಕ್ಕೆ ತಯಾರಾಗುತಿರುವ ಶುಭ ಸಂದರ್ಭಕ್ಕೆ ಅನಿವಾಸಿ ಕನ್ನಡಿಗರ ಪರವಾಗಿ ಶುಭಹಾರೈಕೆಗಳು.
ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ













