ಕಾಂಗ್ರೆಸ್ ಪಕ್ಷದ ವೋಟ್ ಚೋರಿ ಹತಾಶ ಆರೋಪಕ್ಕೆ ತಕ್ಕ ಉತ್ತರ ನೀಡಿದ ಬಿಹಾರ ಜನತೆಗೆ ಅಭಿನಂದನೆ : ಯಶ್ಪಾಲ್ ಸುವರ್ಣ
ಕಾಂಗ್ರೆಸ್ ಪಕ್ಷ ದೇಶದಾದ್ಯಂತ ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ದೇಶದ ಜನತೆಗೆ ಸುಳ್ಳು ಮಾಹಿತಿ ನೀಡಿ ಮಾಡಿದ ವೋಟ್ ಚೋರಿ ಆರೋಪಕ್ಕೆ ಬಿಹಾರ ಜನತೆ ಬಿಜೆಪಿ ಹಾಗೂ ಎನ್ ಡಿ ಎ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ತಕ್ಕ ಉತ್ತರ ನೀಡಿ ಸುಳ್ಳು ಆರೋಪದ ವಿರುದ್ಧ ಸ್ಪಷ್ಟ ಸಂದೇಶ ರವಾನಿಸಿದ ಬಿಹಾರ ಜನತೆಗೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಅಭಿನಂದನೆ ಸಲ್ಲಿಸಿದ್ದಾರೆ.
ದೇಶದ ಚುನಾವಣಾ ಆಯೋಗ ಹಾಗೂ ಚುನಾವಣೆ ವ್ಯವಸ್ಥೆಯ ಮೇಲೆಯೇ ಧಕ್ಕೆ ತರುವ ಪ್ರಯತ್ನ ಮಾಡುವ ಮೂಲಕ ವಿಶ್ವಕ್ಕೆ ಮಾದರಿಯಾಗಿರುವ ಪ್ರಜಾಪ್ರಭುತ್ವ ದೇಶದ ಮತದಾನ ಪ್ರಕ್ರಿಯೆಯನ್ನು ಅನುಮಾನಿಸುವ ರೀತಿಯಲ್ಲಿ ಬಿಂಬಿಸಿದ ಕಾಂಗ್ರೆಸ್ ಪಕ್ಷಕ್ಕೆ ಬಿಹಾರದಲ್ಲಿನ ಹೀನಾಯ ಸೋಲು ತಕ್ಕ ಉತ್ತರ ನೀಡಿದೆ.
ಉಡುಪಿ ಜಿಲ್ಲೆಯಲ್ಲಿಯೂ ವೋಟ್ ಚೋರಿ ಅಭಿಯಾನ ನಡೆಸಿ ಉಡುಪಿ ಜನತೆಯನ್ನು ದಾರಿ ತಪ್ಪಿಸಲು ಹೊರಟ ಕಾಂಗ್ರೆಸ್ ಪಕ್ಷದ ಅಪ್ರಬುದ್ಧ ನಾಯಕರಿಗೆ ಮಸಿ ಬಳಿದಂತಾಗಿದ್ದು, ಬಿಹಾರ ಫಲಿತಾಂಶ ರಾಜ್ಯ ಸರ್ಕಾರದ ಪತನಕ್ಕೆ ಮುನ್ನುಡಿ ಬರೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













