ಕಾಪು ನಗರ ಯೋಜನ ಪ್ರಾಧಿಕಾರಕ್ಕೆ ಪೂರ್ಣಕಾಲಿಕ ಆಧಿಕಾರಿಗಳನ್ನು ನೇಮಿಸಿ – ಮೆಲ್ವಿನ್ ಡಿಸೋಜ
ಉಡುಪಿ: ಕಾಪು ನಗರ ಯೋಜನ ಪ್ರಾಧಿಕಾರಕ್ಕೆ ಪೂರ್ಣಕಾಲಿಕ ಆಧಿಕಾರಿಗಳನ್ನು ನೇಮಿಸಲು ಕಾಂಗ್ರೆಸ್ ಮುಖಂಡ, ನ್ಯಾಯವಾದಿ ಮೆಲ್ವಿನ್ ಡಿಸೋಜ ಆಗ್ರಹಿಸಿದ್ದಾರೆ.
ಕಾಪು ತಾಲೂಕು ಯೋಜನ ಪ್ರಾಧಿಕಾರದಲ್ಲಿ ವರ್ಷಾವಧಿ ಇಂಜಿನಿಯರ್ ಇಲ್ಲದೇ ಜನರ ಕೆಲಸ ಆಗದೆ ಎಲ್ಲ ಚಟುವಟಿಕೆಗಳು ಸ್ವಗಿತಗೊಂಡಿದೆ. ಕಾಪು ತಾಲೂಕು ಅಲ್ಲದೆ ಕಾರ್ಕಳ ತಾಲೂಕಿನವರಿಗೂ ಕೂಡ ಏಕÀ ವಿನ್ಯಾಸ ಅನುಮೋದನೆ ಇಲ್ಲಿ ಆಗÀಬೇಕಾಗಿದ್ದು, ಪೂರ್ಣಕಾಲಿಕ ಇಂಜಿನಿಯರ್ ಇಲ್ಲದೇ ಕಡತಗಳು ಬಾಕಿ ಉಳಿದುಕೊಂಡಿವೆ. ಕಾರ್ಕಳ ತಾಲೂಕಿಗೆ ಪ್ರತ್ಯೇಕ ವ್ಯವಸ್ಥೆ ಆಗಬೇಕಾಗಿದೆ.
ಭೂ ಪರಿವರ್ತನೆ ಆದ ನಂತರ ಇ-ಖಾತ ಮತ್ತು ನಮೂನೆ 9&11ಎ ಪಡೆಯಲು ಏಕ ವಿನ್ಯಾಸ ನಕ್ಷೆ ಅನುಮೋದನೆ ಅಗತ್ಯವಿದ್ದು ಕಾಪು ಯೋಜನಾ ಪ್ರಾಧಿಕಾರದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಾರ್ವಜನಿಕರಿಗೆ ತುಂಬಾ ಅನಾನುಕೂಲ ಉಂಟಾಗಿರುತ್ತದೆ.
ಈ ಹಿಂದೆ ಏಕವಿನ್ಯಾಸ ನಕ್ಷೆ ಅತ್ಯಂತ ಸರಳವಾಗಿ ನಡೆಯುತ್ತಿದ್ದು, ಒಂದು ವಾರದಲ್ಲಿ ಜನರಿಗೆ ಸಿಗುತ್ತಿತ್ತು. ಆದರೆ ಈಗ ಮೂರು ನಾಲ್ಕು ತಿಂಗಳೂ ಆದರೂ ಅನುಮೋದನೆ ಸಿಗುತ್ತಿಲ್ಲ. ಹಿಂದಿನ ವ್ಯವಸ್ಥೆಯನ್ನೇ ಗ್ರಾಮ ಪಂಚಾಯತ್ಗಳಲ್ಲಿ ಮುಂದುವರೆಸಿದಲ್ಲಿ ಜನರಿಗೆ ಅನುಕೂಲವಾಗುತ್ತದೆ. ಈ ಹಿಂದೆ ಆದ ಭೂ ಪರಿವರ್ತನೆಗೆ ಮತ್ತು ಏಕ ವಿನ್ಯಾಸ ಪಡೆಯದೆ ಕಟ್ಟಿದ ಕಟ್ಟಡಗಳಿಗೆ ಈಗ ಏಕ ವಿನ್ಯಾಸ ನಕ್ಷೆ ಸಿಗುತ್ತಿಲ್ಲ. ಇದು ಕೂಡ ಜನರಿಗೆ ಸಮಸ್ಯೆಯಾಗುತ್ತಿದೆ. ಈ ಹಿಂದೆ ಕಟ್ಟಿದ ಕಟ್ಟಡಗಳಿಗೆ ಈಗಿನ ಆದೇಶ ಅನ್ವಯ ಮಾಡುವುದು ಸರಿಯಲ್ಲ. ಸರಕಾರ ಯಾವುದೇ ಹೊಸ ಆದೇಶ ಹೊರಡಿಸುವಾಗ ಅದರ ಸಾಧಕ ಬಾಧಕಗಳ ಬಗ್ಗೆ ತಿಳಿದು ಜನಸ್ನೇಹಿ ಆದೇಶ ಹೊರಡಿಸುವುದು ಉತ್ತಮ.
ಮನೆ ಕಟ್ಟಲು ಬೇಕಾದ ¥ರವಾನಿಗೆ ಪಡೆಯಲು ಮತ್ತು ಬ್ಯಾಂಕ್ ನಲ್ಲಿ ಸಾಲ ಪಡೆಯಲು ಏಕ ವಿನ್ಯಾಸ ನಕ್ಷೆ ಅತೀ ಅಗತ್ಯವಿರುವುದರಿಂದ ಅಭಿವೃದ್ದಿ ಕಾರ್ಯಗಳು ನಿಂತು ಹೋಗಿವೆ. ಈ ಹಿಂದೆ ಒಬ್ಬರೇ ಅಧಿಕಾರಿ ಇದ್ದು ಕಡತಗಳು ಬಾಕಿ ಉಳಿದುಕೊಂಡಿವೆ. ಈಗ ಹೊಸ ಅಧಿಕಾರಿ ನೇಮಗೊಂಡಿದ್ದು ಅವರು ಅಧಿಕಾರ ವಹಿಸದೆ ಇರುವುದರಿಂದ ಕಳೆದ 1 ತಿಂಗಳಿನಿAದ ಯಾವುದೇ ಕೆಲಸ ಕಾರ್ಯ ನಡೆಯದೆ ಯೋಜನಾ ಪ್ರಾಧಿಕಾರ ಕಚೇರಿ ಇದ್ದೂ ಇಲ್ಲದಂತಾಗಿದೆ. ಅಧಿಕಾರಿಗಳು ಕಾಪು ಹಾಗೂ ಉಡುಪಿಯಲ್ಲಿ ಪ್ರಾಧಿಕಾರ ಕಚೇರಿಯಲ್ಲಿ ಅಧಿಕಾರವಹಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಅಂತಹ ಆಧಿಕಾರಿಗಳ ಮೇಲೆ ಕ್ರಮ ಆಗಬೇಕಾಗಿದೆ. ಕಾಪು ಕ್ಷೇತ್ರದ ಶಾಸಕರು ಈ ಬಗ್ಗೆ ಗಮನಹರಿಸಬೇಕಾಗಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೇ ಇಂಜಿನಿಯರ್ ನೇಮಕಗೊಳಿಸಿ ಗ್ರಾಮ ಪಂಚಾಯತ್ ನಲ್ಲಿಯೇ ಏಕ ವಿನ್ಯಾಸ ಅನುಮೋದನೆ ಸಿಗುವಂತೆ ಆಗಬೇಕಾಗಿದೆ. ಏಕ ವಿನ್ಯಾಸ ಅನುಮೋದನೆ ಒಂದೂ ವಾರದಲ್ಲಿ ಸಿಗಬೇಕಾಗಿದೆ. ಮೂರು ನಾಲ್ಕೂ ತಿಂಗಳು ಆದರೂ ಸಿಗದೇ ಇರುವುದರಿಂದ ಪಂಚಾಯತ್ಗೂ ಆದಾಯ ಕಡಿತಗೊಂಡಿದೆ. ಸಾಲ ಸಿಗುತ್ತಿಲ್ಲ, ಮನೆ ನಿರ್ಮಾಣ ಕೆಲಸ ಸ್ಥಗಿತಗೊಂಡಿದ್ದು ಸರ್ಕಾರಕ್ಕೂ ಆದಾಯ ನಷ್ಟವಾಗಿದೆ.
ಆದುದರಿಂದ ಕೂಡಲೇ ಕಾಪು ಯೋಜನೆಯ ಪ್ರಾಧಿಕಾರಕ್ಕೆ ಪೂರ್ಣಕಾಲಿಕ ಇಬ್ಬರು ಅಧಿಕಾರಿಗಳ ನೇಮಕ ಮಾಡಿ ಜನರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಿಕೊಳ್ಳಬೇಕಾಗಿ ಸರ್ಕಾರವನ್ನು ಮತ್ತು ಜಿಲ್ಲಾಡಳಿತವನ್ನು ಮೆಲ್ವಿನ್ ಡಿಸೋಜ ಅವರು ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.