ಕಾರು ಅಪಘಾತದಿಂದ ಮತ್ತೊಮ್ಮೆ ಪಾರಾದ ಕೇಂದ್ರ ಸಚಿವ ಅನಂತ ಕುಮಾರ್​ ಹೆಗಡೆ

Spread the love

ಕಾರು ಅಪಘಾತದಿಂದ ಮತ್ತೊಮ್ಮೆ ಪಾರಾದ ಕೇಂದ್ರ ಸಚಿವ ಅನಂತ ಕುಮಾರ್​ ಹೆಗಡೆ

ಕಾರವಾರ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಮತ್ತೊಮ್ಮೆ ಕಾರು ಅಪಘಾತದಿಂದ ಪಾರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಕುಮಟಾಕ್ಕೆ ತೆರಳವ ವೇಳೆ ಕತಗಾಲ ಬಳಿ ಸಚಿವರ ಕಾರು ಅಪಘಾತವಾಗಿದೆ. ಸಚಿವರ ಬೆಂಗಾವಲು ವಾಹನಕ್ಕೆ ಅಡ್ಡ ಬಂದ ಕಾರಿನಿಂದ ಬೆಂಗಾವಲು ವಾಹನ ಮತ್ತು ಸಚಿವರ ವಾಹನಕ್ಕೂ ಹಾನಿಯಾಗಿದೆ.

ಈ ಹಿಂದೆ ಹಾವೇರಿಯ ರಾಣೇಬೆನ್ನೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಹೆಗಡೆ ಅವರ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಈ ಬಗ್ಗೆ ಹಲವು ಚರ್ಚೆಗಳು ಕೂಡ ನಡೆದಿತ್ತು.

ನಾನು ಮತ್ತೊಂದು ಕಾರು ಅಪಘಾತದಿಂದ ಪಾರಾಗಿದ್ದು, ಮತ್ತೊಂದು ಪುನರ್ಜನ್ಮ ಪಡೆದಿದ್ದೇನೆ ಎಂದು ಅಪಘಾತದ ಬಗ್ಗೆ ಹೆಗಡೆ ಅವರು ಟ್ವೀಟ್ ಮಾಡಿದ್ದಾರೆ.


Spread the love
1 Comment
8 years ago

This guy needs to change his driver.