ಕುಟುಂಬದ ಮೂಲಮನೆಯ ನೇಮೋತ್ಸವದಲ್ಲಿ ನಟ ರಕ್ಷಿತ್ ಶೆಟ್ಟಿ ಭಾಗಿ

Spread the love

ಕುಟುಂಬದ ಮೂಲಮನೆಯ ನೇಮೋತ್ಸವದಲ್ಲಿ ನಟ ರಕ್ಷಿತ್ ಶೆಟ್ಟಿ ಭಾಗಿ

ಉಡುಪಿ: ಅಲೆವೂರು ಡೊಡ್ಡಮನೆ ಇದರ ನೇಮೋತ್ಸವ ಗುರುವಾರ ಹೆಸರಾಂತ ನಟ ರಕ್ಷಿತ್ ಶೆಟ್ಟಿಯವರ ಮೂಲ ಮನೆಯಲ್ಲಿ ಭಕ್ತಿಪೂರ್ವಕವಾಗಿ ನಡೆಯಿತು.

ಈ ವೇಳೆ ರಕ್ಷಿತ್ ಶೆಟ್ಟಿಯವರು ದೈವದ ಮುಖವಾಡವನ್ನು ಹಿಡಿದುಕೊಂಡು ಬಾಳು ಭಂಡಾರದ ಕಾರ್ಯದಲ್ಲಿ ಶುಕ್ರವಾರ ಬೆಳಿಗ್ಗಿನ ಜಾವದ ವರೆಗೆ ನಡೆಯುವ ಧಾರ್ಮಿಕ ವಿಧಿವಿಧಾನದಲ್ಲಿ ಭಾಗವಹಿಸಲಿದ್ದಾರೆ.

ಈ ವೇಳೆ ಶ್ರೀಧರ್ ಶೆಟ್ಟಿ, ಮನೆಯ ಹಿರಿಯರಾದ ಹರೀಶ್ ಶೆಟ್ಟಿ, ಗೋವಿಂದ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ರಾಮ ಶೆಟ್ಟಿ, ರಾಜೇಶ್ ಶೆಟ್ಟಿ ಮುಂಬೈ ಸೇರಿದಂತೆ ಕುಟುಂಬದ ಹಿರಿಯರು ಭಾಗವಹಿಸಿದ್ದರು.


Spread the love