ಕುವೈಟ್ ನಿಂದ ಮಂಗಳೂರಿಗೆ ಹೊರಟ ಪ್ರಥಮ ಚಾರ್ಟರ್ ವಿಮಾನ

Spread the love

ಕುವೈಟ್ ನಿಂದ ಮಂಗಳೂರಿಗೆ ಹೊರಟ ಪ್ರಥಮ ಚಾರ್ಟರ್ ವಿಮಾನ

ಮಂಗಳೂರು: ಕೋವಿಡ್ ಸೋಂಕಿನಿಂದ ಕುವೈಟ್ ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ಹೊತ್ತ ಖಾಸಗಿ ವಿಮಾನ ಕುವೈಟ್ ನಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದೆ.

ಕುವೈಟ್ನಿಂದ ರಾಜ್ಯಕ್ಕೆ ಆಗಮಿಸುವ ಮೊದಲ ವಿಮಾನವೂ ಇದಾಗಿದೆ. ಅಕ್ಟರ್ ಟ್ರಾವೆಲ್ಸ್ ಸಂಸ್ಥೆಯವರು ಜಝಿರ ಏರ್ವೇಸ್ ಸಹಯೋಗದೊಂದಿಗೆ ಈ ಚಾರ್ಟರ್ ವಿಮಾನದ ವ್ಯವಸ್ಥೆ ಕೈಗೊಂಡಿದೆ. 180 ಪ್ರಯಾಣಿಕರು ಈ ವಿಮಾನ ಮೂಲಕ ಸ್ವದೇಶಕ್ಕೆ ಮರಳಲಿದ್ದಾರೆ.

ಬುಧವಾರ ಸಂಜೆ ವೇಳೆಗೆ ಮಂಗಳೂರು ತಲುಪಲಿದೆ, ಕುವೈಟ್ ನಲ್ಲಿ ಕೋವಿಡ್ ಸಮಸ್ಯೆಯಿಂದಾಗಿ ತಾಯಿನಾಡಿಗೆ ಬರಲಾಗದೆ ಸಮಸ್ಯೆ ಅನುಭವಿಸುತ್ತಿದ್ದ ಜನರನ್ನು ಅಲ್ಲಿಂದ ಕರೆತರುವ ನಿಟ್ಟಿನಲ್ಲಿ ಖಾಸಗಿ ವಿಮಾನ ಪ್ರಯಾಣ ಬೆಳೆಸಿತ್ತು ಆದರೆ ಅಂತಾರಾಷ್ಟ್ರೀಯ ಸಂಚಾರದ ಬಗ್ಗೆ ಅನುಮತಿ ಪ್ರಕ್ರಿಯೆ ಕ್ರಮಗಳನ್ನು ಪೂರೈಸಬೇಕಾದ ಹಿನ್ನೆಲೆಯಲ್ಲಿ ಕೊಂಚ ವಿಳಂಬವಾಗಿದ್ದು ಆದರೆ ಈಗ ಎಲ್ಲಾ ಪ್ರಕ್ರೀಯೆಗಳು ಪೂರ್ಣಗೊಂಡಿದ್ದು, ಕುವೈಟ್ ನಿಂದ ಜನರನ್ನು ಹೊತ್ತ ವಿಮಾನ ಬುಧವಾರ ಸಂಜೆ ಮಂಗಳೂರು ತಲುಪಲಿದೆ.

ಇದನ್ನೂ ಓದಿ : ಜೂ. 17 ರಂದು ಮಂಗಳೂರಿಗೆ ಕುವೈಟ್ ನಿಂದ ಪ್ರಥಮ ಚಾರ್ಟರ್ ವಿಮಾನ ಆಗಮನ


Spread the love