ಕೂಳೂರು ಸೇತುವೆ ಕಾಮಗಾರಿ ಹಿನ್ನಲೆ ಟ್ರಾಫಿಕ್ ಜಾಮ್
“ಮಂಗಳೂರಿನಲ್ಲಿ ಈ ಬೆಳಗ್ಗೆ ಮುಂಜಾನೆಯಿಂದಲೇ ವಾಹನ ಸವಾರರಿಗೆ ಪರದಾಟದ ಪರಿಸ್ಥಿತಿ ಎದುರಾಗಿದ್ದು, ಕೂಳೂರು ಸೇತುವೆ ಮತ್ತು ರಸ್ತೆ ಕಾಮಗಾರಿಯ ಹಿನ್ನಲೆಯಲ್ಲಿ ವಾಹನ ಸಂಚಾರದಲ್ಲಿ ತೀವ್ರ ತೊಡಕು ಉಂಟಾಗಿದೆ.” ವೀಡಿಯೋವೊಂದರಲ್ಲಿ ರಸ್ತೆ ಮೇಲೆ ನಿಂತಿರುವ ವಾಹನಗಳು, ವಾಹನ ಸವಾರರ ಬೇಸರದ ದೃಶ್ಯಗಳು
ಕಾಣಬಹುದಾಗಿದೆ
“ನಾವು ಕಾಣುವುದು ಮಂಗಳೂರು ನಗರದ ಪ್ರಮುಖ ಸಂಪರ್ಕ ಹೆದ್ದಾರಿ, ಕೂಳೂರು ಸೇತುವೆ ಬಳಿ. ಇಲ್ಲಿ ಇಂದಿನಿಂದ ಫುಲ್ ಬ್ಲಾಕ್ ಘೋಷಿಸಲಾಗಿದೆ. ಕಾಮಗಾರಿಯ ಹಿನ್ನಲೆಯಲ್ಲಿ ಸೇತುವೆಯಲ್ಲಿ ಈಗ ಏಕಮುಖ ಸಂಚಾರ ನಡೆಯುತ್ತಿದೆ.”
“ಈ ಏಕಮುಖ ಸಂಚಾರದಿಂದಾಗಿ ಸೇತುವೆಯಿಂದ ಕೊಟ್ಟಾರ ಮಾರ್ಗವರೆಗೆ ವಾಹನಗಳ ನಿರಂತರ ಸರದಿ ಕಾಣಸಿಗುತ್ತಿದೆ. ವಾಹನ ಸವಾರರು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ.”
“ಕೂಳೂರು ಸೇತುವೆಯ ಕಾಮಗಾರಿ ಪೂರ್ಣಗೊಳ್ಳುವವರೆಗೂ ಈ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ. ಅಧಿಕಾರಿಗಳು ಪರ್ಯಾಯ ಮಾರ್ಗ ಬಳಸುವಂತೆ ನೆನ್ನೆ ಆದೇಶಿಸಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ
“ಇಂತಹ ತಾತ್ಕಾಲಿಕ ತೊಂದರೆಗಳು ಮುಂದಿನ ದಿನಗಳಲ್ಲಿ ಉತ್ತಮ ಸೌಕರ್ಯಕ್ಕಾಗಿ ಮೂಲವಾಗಿದೆ ಎಂಬುದನ್ನು ಮರೆಯಬಾರದು. ನಗರ ನಾಗರಿಕರು ಸಹನೆ ಮತ್ತು ಜವಾಬ್ದಾರಿಯಿಂದ ವರ್ತಿಸುವಂತೆ ಕೇಳಿಕೊಳ್ಳಲಾಗುತ್ತಿದೆ.”