ಕೆಥೊಲಿಕ್ ಸಭಾ ಪಿಯುಸ್ ನಗರ ವತಿಯಿಂದ ಕೋಡಿ ಸಮುದ್ರ ತೀರ ಸ್ವಚತೆ

Spread the love

ಕೆಥೊಲಿಕ್ ಸಭಾ ಪಿಯುಸ್ ನಗರ ವತಿಯಿಂದ ಕೋಡಿ ಸಮುದ್ರ ತೀರ ಸ್ವಚತೆ

ಕುಂದಾಪುರ: ಕೆಥೊಲಿಕ್ ಸಭಾ ಪಿಯುಸ್ ನಗರ, ಹಂಗ್ಲೂರು, ಕುಂದಾಪುರದವರು ಬುಧವಾರ ಸ್ವಚ್ಛ ಹಾಗೂ ನಿರ್ಮಲ ಪರಿಸರ ಅಭಿಯಾನವನ್ನು ಕುಂದಾಪುರ ಕೊಡಿ ಸಮುದ್ರ ತೀರವನ್ನು ಸ್ವಚ್ಛ ಗೊಳಿಸುವ ಮೂಲಕ ನೇರವೇರಿಸಿದರು.

ಕಥೋಲಿಕ್ ಸಭಾ ಪಿಯುಸ್ ನಗರದ ಅಧ್ಯಕ್ಷರಾದ ವಿಲ್ಫ್ರೆಡ್ ಮಿನೇಜಸ್ ಅವರ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ನಿರ್ಮಲ ಪರಿಸರ ನಮ್ಮ ಕರ್ತವ್ಯವೆನ್ನುವ ಧೇಯವನ್ನು ಪರಿಸರದ ನಿವಾಸಿಗಳಿಗೆ ಜಾಗೃತಿ ಮೂಡಿಸಿದರು .

ಕುಂದಾಪುರ ವಲಯ ಕಾರ್ಯದರ್ಶಿಗಳಾದ ಲೀನಾ ತಾವ್ರೊ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ವಾಲ್ಟರ್ ಫೆರ್ನಾಂಡಿಸ್ ಹಾಗೂ ಲಯನ್ಸ್ ಕ್ಲಬ್, ಹಂಗಳೂರಿನ ಪದಾಧಿಕಾರಿಗಳಾದ ವಿಲ್ಫ್ರೆಡ್ ಡಿಸೋಜಾ, ಆರ್ಚಿಬೊಲ್ಡ್ ಕ್ವಾಡ್ರಸ್, ಸ್ಟಾನಿ ಡಿಮೆಲ್ಲೊ ಹಾಗೂ ರೋಟರಿ ಕ್ಲಬ್ ಕುಂದಾಪುರದ ಸ್ಟಾನಿ ಡಿಸೋಜಾ ಹಾಗೂ ಐಸಿವೈಎಮ್ ಅಧ್ಯಕ್ಷರಾದ ಜೆಸನ್ ಡಿ ಸೋಜಾ ಹಾಜರಿದ್ದರು.

ಕೆಥೊಲಿಕ್ ಸಭಾ ನಿಯೊಜಿತ ಅಧ್ಯಕ್ಷರಾದ ನ್ಯಾನ್ಸಿ ವಾಜ್ ಕಾರ್ಯಕ್ರಮ ನೇರವೇರಿಸಿದರು. ಕಥೊಲಿಕ್ ಸ್ತ್ರೀ ಸಂಘಟನ್ ಉಡುಪಿಯ ಕೇಂದ್ರೀಯ ಅಧ್ಯಕ್ಷರಾದ ಪ್ರಮೀಳಾ ಡೆಸಾರವರು ಧನ್ಯವಾದ ಅರ್ಪಿಸಿದರು.


Spread the love