ಕೆಪಿಟಿ ಬಳಿ ಲಾರಿ- ಬೈಕ್ ಡಿಕ್ಕಿ; ಹಿಂಬದಿ ಸವಾರ ಮಹಿಳೆ ಸಾವು

Spread the love

ಕೆಪಿಟಿ ಬಳಿ ಲಾರಿ- ಬೈಕ್ ಡಿಕ್ಕಿ; ಹಿಂಬದಿ ಸವಾರ ಮಹಿಳೆ ಸಾವು

ಮಂಗಳೂರು: ಲಾರಿ ಹಾಗೂ ಬೈಕ್ ನಡುವೆ ನಡೆದ ಅಫಘಾತದಲ್ಲಿ ಬೈಕ್ ಹಿಂಬದಿ ಕುಳಿತ ಯುವತಿಯೋರ್ವರು ಸಾವನಪ್ಪಿದ ಘಟನೆ ನಗರದ ಕೆಪಿಟಿ ಬುಧವಾರ ಸಂಭವಿಸಿದೆ.

ಮೃತ ಯುವತಿಯನ್ನು ಗುರುಪುರ ನಿವಾಸಿ ಖಮರುನ್ನಿಸಾ (26) ಎಂದು ಗುರುತಿಸಲಾಗಿದೆ. ಬೈಕ್ ಸವಾರ ನೌಫಾಲ್ (28) ತೀವ್ರವಾಗಿ ಗಾಯಗೊಂಡಿದ್ದಾರೆ.

ಬುಧವಾರ ನೌಫಲ್ ಮತ್ತು ಖಮರುನ್ನಿಸಾ ಅವರು ದ್ವಿಚಕ್ರವಾಹನದಲ್ಲಿ ಕೆಪಿಟಿಯಿಂದ ಕದ್ರಿ ಕಡೆಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಲಾರಿಯೊಂದು ಕೆಪಿಟಿ ಬಳಿಯ ಹಳೆಯ ಪೆಟ್ರೋಲ್ ಪಂಪ್ ಬಳಿ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ನೌಫಲ್ ಮತ್ತು ಖಮರುನ್ನಿಸಾ ರಸ್ತೆಗೆ ಎಸೆಯಲ್ಪಿಟ್ಟಿದ್ದು, ಲಾರಿಯ ಚಕ್ರ ಖಮರುನ್ನಿಸಾರ ತಲೆಯ ಮೇಲೆ ಹರಿದಿದ್ದು, ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love