ಕೊಕ್ಕಡ ಬೈಕ್ – ಪಿಕ್ ಅಪ್ ಡಿಕ್ಕಿ – ಅಯ್ಯಪ್ಪ ವೃತಧಾರಿ ಸಾವು

Spread the love

ಕೊಕ್ಕಡ ಬೈಕ್ – ಪಿಕ್ ಅಪ್ ಡಿಕ್ಕಿ – ಅಯ್ಯಪ್ಪ ವೃತಧಾರಿ ಸಾವು

ಬೆಳ್ತಂಗಡಿ: ಬೈಕ್ ಹಾಗೂ ಪಿಕ್ ಅಪ್ ವಾಹನದ ನಡುವೆ ನಡೆದ ಅಫಘಾತದಲ್ಲಿ 34 ವರ್ಷ ವಯಸ್ಸಿನ ಅಯ್ಯಪ್ಪ ವೃತಾಧಾರಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಉಪ್ಪಾರಪಳಿಕೆ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ

ಮೃತರನ್ನು ವಿಟ್ಲ ನಿವಾಸಿ ಧನಂಜಯ (34) ಎಂದು ಗುರುತಿಸಲಾಗಿದೆ. ಧನಂಜಯ ಅವರು ವೃತ್ತಿಯಲ್ಲಿ ಛಾಯಾಚಿತ್ರಗ್ರಾಹಕರು ಎನ್ನಲಾಗಿದೆ.

ಧನಂಜಯ ಶುಕ್ರವಾರ ಬೆಳಿಗ್ಗೆ ತನ್ನ ಪತ್ನಿಯ ಮನೆಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದ್ದು, ಪತ್ನಿ ಹಾಗೂ ಮಗುವನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೋಲಿಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


Spread the love