ಕೊರೋನಾ ವೈರಸ್: ಉಡುಪಿಯಲ್ಲಿ ಮತ್ತೆ 9ಹೊಸ ಪಾಸಿಟಿವ್ ಪ್ರಕರಣ ದೃಢ

Spread the love

ಕೊರೋನಾ ವೈರಸ್: ಉಡುಪಿಯಲ್ಲಿ ಮತ್ತೆ 9ಹೊಸ ಪಾಸಿಟಿವ್ ಪ್ರಕರಣ ದೃಢ

ಉಡುಪಿ: ಉಡುಪಿ ಜಿಲ್ಲೆಯಲ್ಲಿ  ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 120 ಕ್ಕೆ ಏರಿಕೆಯಾಗಿದ್ದು,  ಬುಧವಾರ ಜಿಲ್ಲೆಯಲ್ಲಿ ಮತ್ತೆ 9 ಮಂದಿಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ದೃಢವಾಗಿದೆ.

ಪಾಸಿಟಿವ್ ದೃಢಪಟ್ಟ 9 ಮಂದಿ ಕೂಡ ಮಹಾರಾಷ್ಟ್ರದಿಂದ ಬಂದವರಾಗಿದ್ದು, ಇದರಲ್ಲಿ ಆರು ಪುರುಷರು, ಇಬ್ಬರು ಮಹಿಳೆಯರು ಮತ್ತು 9 ವರ್ಷದ ಒರ್ವ ಗಂಡು ಮಗುವಿನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಎಲ್ಲಾ 9 ಮಂದಿ ಕ್ವಾರಂಟೈನ್ ನಲ್ಲಿದ್ದು ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿದಾಗ ಕೋರೋನಾ ದೃಢಪಟ್ಟಿದೆ. ಎಲ್ಲಾ 9 ಮಂದಿಯನ್ನು ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಲಾಗುವುದು.


Spread the love