ಗಂಗೊಳ್ಳಿ : ಕಾರಿನಲ್ಲಿ ಅಕ್ರಮ ದನದ ಮಾಂಸ ಸಾಗಾಟ ; ಇಬ್ಬರ ಬಂಧನ

Spread the love

ಗಂಗೊಳ್ಳಿ : ಕಾರಿನಲ್ಲಿ ಅಕ್ರಮ ದನದ ಮಾಂಸ ಸಾಗಾಟ ; ಇಬ್ಬರ ಬಂಧನ

ಕುಂದಾಪುರ: ಕಾರಿನಲ್ಲಿ ಅಕ್ರಮವಾದ ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಗಂಗೊಳ್ಳಿ ಪೊಲೀಸರು ಇಬ್ಬರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಬಂಧಿತರನ್ನು ಗಂಗೊಳ್ಳಿ ಬೀಚ್ ರಸ್ತೆ ನಿವಾಸಿಗಳಾದ ಮೊಹಮ್ಮದ್ ಶಫಾನ್ (30), ನಿಜಾಮ್ ಕನ್ನಂಗರ್ ಮೊಹಿದ್ದೀನ್(33) ಎಂದು ಗುರುತಿಸಲಾಗಿದೆ.

ಗಂಗೊಳ್ಳಿ ಪೊಲೀಸ್ ಠಾಣಾ ಪಿ.ಎಸ್.ಐ ಭೀಮಾಶಂಕರ ಸಿನ್ನೂರ ಸಂಗಣ್ಣ ಅವರು ದಿನಾಂಕ ಆ.5 ಮಂಗಳವಾರರ ರಾತ್ರಿ 12:10 ಕ್ಕೆ ಸಿಬ್ಬಂದಿಗಳಾದ ರಾಜೇಶ್, ಪ್ರೊಬೇಷನರಿ ಪಿ.ಎಸ್.ಐ ದೇವರಾಜ ಸಿದ್ದಣ್ಣ ಬಿರಾದಾರ ಹಾಗೂ ಹೆಡ್ ಕಾನ್ಸ್ಟೇಬಲ್ ಸಂತೋಷ ಖಾರ್ವಿಯವರೊಂದಿಗೆ ಗಂಗೊಳ್ಳಿ ಪೇಟೆಯ ಗಂಗೊಳ್ಳಿ ಗ್ರಾಮಪಂಚಾಯತ್ ಕಛೇರಿಯ ಸಮೀಪದಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದು, ವಾಹನ ತಪಾಸಣೆ ಮಾಡುತ್ತಿದ್ದಾಗ ತ್ರಾಸಿ ಕಡೆಯಿಂದ ಗಂಗೊಳ್ಳಿ ಬಂದರ್ ಕಡೆಗೆ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದನದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ

ಬಂಧಿತರಿಂದ 13 ಕೆ.ಜಿ. ತೂಕದ ದನದ ಮಾಂಸ ಹಾಗೂ ಸಾಗಾಟಕ್ಕೆ ಬಳಸಿದ ಸ್ವಿಫ್ಟ್ ಕಾರು ವಶಕ್ಕೆ ಪಡೆಯಲಾಗಿದೆ.

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.


Spread the love