ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

Spread the love

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅಹಮ್ಮದ್ ಬಶೀರ್(45) ಎಂದು ಗುರುತಿಸಲಾಗಿದೆ

ಅಗೋಸ್ಟ್ 7ರಂದು ಮಂಗಳೂರು ನಗರದ ಫಳ್ನೀರ್ ಉಷಾ ಹೋಟೇಲ್ ರಸ್ತೆ ಪಕ್ಕದಲ್ಲಿರುವ ಜಿ.ಐ ಬೇಕರಿ ಸಮೀಪ ಅಹಮ್ಮದ್ ಬಶೀರ್(45) ಎಂಬಾತನು ಗಾಂಜಾ ಮಾರಾಟ ಮಾಡುತ್ತಿದ್ದಾನೆಂಬ ಮಾಹಿತಿಯನುಸಾರ ದಾಳಿ ಮಾಡಿ, ಆರೋಪಿಯಿಂದ ರೂ. 80 ಸಾವಿರ ಮೌಲ್ಯದ 2 ಕೆ.ಜಿ. 120 ಗ್ರಾಂ ಗಾಂಜಾ ಮತ್ತು ಗಾಂಜಾ ಮಾರಾಟಕ್ಕೆ ಬಳಸಿದ ರೂ. 50 ಸಾವಿರ ಮೌಲ್ಯದ ದ್ವಿಚಕ್ರ ವಾಹನವನ್ನು ಸ್ವಾಧೀನಪಡಿಸಿಕೊಂಡು ಆರೋಪಿ ವಿರುದ್ದ ಎನ್.ಡಿ.ಪಿ.ಎಸ್. ಕಾಯಿದೆಯಡಿ ಪ್ರಕರಣ ದಾಖಲಾಗಿಸಲಾಗಿ ದೆ.

ಈ ದಾಳಿಯನ್ನು ಪೊಲೀಸ್ ಆಯುಕ್ತರು ಮಂಗಳೂರು ನಗರ, ಉಪ ಪೊಲೀಸ್ ಆಯುಕ್ತರು(ಕಾಸು), ಉಪ ಪೊಲೀಸ್ ಆಯುಕ್ತರು(ಕ್ರೈಂ ಆಂಡ್ ಟ್ರಾಫಿಕ್) ಮಂಗಳೂರು ನಗರ, ಎಸಿಪಿ ಸೆಂಟ್ರಲ್ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸ್ ಪೆಕ್ಟರ್ ಗೋವಿಂದರಾಜು ರವರ ನೇತೃತ್ವದಲ್ಲಿ ಪಿ.ಎಸ್.ಐ ನಾಗರಾಜ್ ಮತ್ತು ಸಿಬ್ಬಂಧಿಗಳಾದ ಹೆಚ್.ಸಿ 672 ಸುಜನ್ ಶೆಟ್ಟಿ, ಹೆಚ್.ಸಿ 673 ಮಹೇಶ್, ಹಾಗೂ ಸೆಂಟ್ರಪ್ ಉಪ ವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಗಳಾದ ಗಂಗಾಧರ ಹೆಚ್ ಸಿ 819, ವೆಲೆಸ್ಟಿನ್ ಡಿಸೋಜಾ ಹೆಚ್ ಸಿ 2003, ಸಂತೋಷ್ ಹೆಚ್.ಸಿ 2203, ಕಿಶೋರ್ ಹೆಚ್ ಸಿ 802, ನಾಗರಾಜ ಪಿಸಿ 497, ಅಂಜನಪ್ಪ ಪಿಸಿ 401 , ಬೀಮಪ್ಪ 399, ರಮೇಶ ಪಿಸಿ 374 ರವರ ಸಹಕಾರದೊಂದಿಗೆ ದಾಳಿ ನಡೆಸಲಾಗಿದೆ.


Spread the love